ADVERTISEMENT

ಸಿನಿಮಾ ಪಾತ್ರದ ಬಗ್ಗೆ ಗುಂಜನ್ ಸಕ್ಸೆನಾ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್

ಪಿಟಿಐ
Published 19 ಸೆಪ್ಟೆಂಬರ್ 2020, 4:41 IST
Last Updated 19 ಸೆಪ್ಟೆಂಬರ್ 2020, 4:41 IST
'ಗುಂಜನ್ ಸಕ್ಸೆನಾ' ಚಿತ್ರದ ದೃಶ್ಯ.
'ಗುಂಜನ್ ಸಕ್ಸೆನಾ' ಚಿತ್ರದ ದೃಶ್ಯ.   

ನವದೆಹಲಿ: ನೆಟ್‌ಫ್ಲಿಕ್ಸ್‌ನಲ್ಲಿ ಈಚೆಗೆ ಬಿಡುಗಡೆಯಾಗಿದ್ದ 'ಗುಂಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್' ಸಿನಿಮಾದಲ್ಲಿ ಭಾರತೀಯ ವಾಯುಪಡೆ ಮತ್ತು ತಮ್ಮ ಪಾತ್ರವನ್ನು ಬಿಂಬಿಸಿರುವ ರೀತಿಯ ಬಗ್ಗೆ ತಮ್ಮ ಅಭಿಪ್ರಾಯದ ಅಫಿಡವಿಟ್‌ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್‌ ಶುಕ್ರವಾರ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೆನಾ ಅವರಿಗೆ ಸೂಚಿಸಿದೆ.

'ನಿಮ್ಮೊಂದಿಗೆ ಮಾಡಿಕೊಂಡಿದ್ದ ಯಾವುದೇ ಒಪ್ಪಂದವನ್ನು ಚಿತ್ರ ನಿರ್ಮಾಪಕರು ಉಲ್ಲಂಘಿಸಿದ್ದಾರೆಯೇ' ಎಂಬ ಬಗ್ಗೆಯೂ ಅಫಿಡವಿಟ್‌ನಲ್ಲಿ ಮಾಹಿತಿ ಇರಬೇಕು ಎಂದು ನ್ಯಾಯಮೂರ್ತಿ ರಾಜೀವ್ ಶಖ್ದೇರ್‌ ಅವರ ಏಕಸದಸ್ಯ ನ್ಯಾಯಪೀಠವು ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನುಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.

'ಈ ಚಿತ್ರವು ಗುಂಜನ್ ಸಕ್ಸೆನಾ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. ಆದರೆ ಅವರ ಜೀವನ ಆಧರಿಸಿದ ಚಿತ್ರವಲ್ಲ' ಎಂದು ಚಿತ್ರದ ಸೂಚನೆಯು ಸ್ಪಷ್ಟಪಡಿಸುತ್ತದೆಎಂದು ಸಕ್ಸೆನಾ ಪರ ವಕೀಲ ದಯನ್ ಕೃಷ್ಣನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ADVERTISEMENT

'ಈ ಚಿತ್ರವು ವಾಯುಪಡೆಯನ್ನು ವೈಭವೀಕರಿಸುತ್ತದೆಎಂದು ಸಕ್ಸೆನಾ ವೈಯಕ್ತಿಕವಾಗಿ ಅಭಿಪ್ರಾಯಪಡುತ್ತಾರೆ' ಎಂದು ಅವರು ನ್ಯಾಯಾಲಯಕ್ಕೆ ಹೇಳಿದರು.

ಕೇಂದ್ರ ಸರ್ಕಾರ ಮತ್ತು ಭಾರತೀಯ ವಾಯುಪಡೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, 'ಗುಂಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್' ಸಿನಿಮಾಕ್ಕೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಧರ್ಮ ಪ್ರೊಡಕ್ಷನ್ಸ್‌, ಕರಣ್ ಯಶ್ ಜೋಹರ್, ಜೀ ಎಂಟರ್‌ಟೈನ್‌ಮೆಂಟ್, ನೆಟ್‌ಫ್ಲಿಕ್ಸ್‌ ಮತ್ತು ಇತರರಿಗೆಪ್ರತಿಕ್ರಿಯೆ ನೀಡಲು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.