ADVERTISEMENT

ಪೈಲಟ್‌ಗಳ ವಿಶ್ರಾಂತಿ, ರಜೆ ನಿಯಮ ‘ಅನಿರ್ದಿಷ್ಟ’ ಸಡಿಲಿಕೆ: ಪ್ರಶ್ನಿಸಿದ ಹೈಕೋರ್ಟ್

ಪಿಟಿಐ
Published 30 ಜನವರಿ 2026, 15:22 IST
Last Updated 30 ಜನವರಿ 2026, 15:22 IST
<div class="paragraphs"><p>ದೆಹಲಿ ಹೈಕೋರ್ಟ್‌</p></div>

ದೆಹಲಿ ಹೈಕೋರ್ಟ್‌

   

ನವದೆಹಲಿ: ಪೈಲಟ್‌ಗಳ ವಾರದ ವಿಶ್ರಾಂತಿ ಅವಧಿ ಹಾಗೂ ರಜೆಯ ಹೊಸ ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗಿರುವ ‘ಅನಿರ್ದಿಷ್ಟ’ ಸಡಿಲಿಕೆ ಕುರಿತು ಡಿಜಿಸಿಎಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.

ಈ ವಿಷಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಕುರಿತು ನೋಟಿಸ್‌ ನೀಡಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು, ‘ಯಾವುದೇ ರಜೆಯನ್ನು ವಾರದ ವಿಶ್ರಾಂತಿಯ ಅವಧಿಗೆ ಬದಲಿಸಬಾರದು’ ಎಂದಿದೆ.

ADVERTISEMENT

ಹೊಸ ಫ್ಲೈಟ್‌– ಡ್ಯೂಟಿ ಮಾನದಂಡವನ್ನು ತಕ್ಷಣ ಹಿಂತೆಗೆದುಕೊಳ್ಳುವ ನಿರ್ಧಾರದ ಹಿಂದಿನ ‘ತಾರ್ಕಿಕ’ವನ್ನು ವಿವರಿಸುವಂತೆ ವಾಯುಯಾನ ನಿಯಂತ್ರಕರನ್ನು ಕೇಳಿದೆ.

ಪಿಐಎಲ್‌ಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹಾಗೂ ಇಂಡಿಗೊ ವಿಮಾನಯಾನ ಸಂಸ್ಥೆಗೆ ನ್ಯಾಯಪೀಠ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.