ADVERTISEMENT

ಸಂಜೋತಾ ಎಕ್ಸ್‌ಪ್ರೆಸ್ ನಂತರ ದೆಹಲಿ- ಲಾಹೋರ್ ಬಸ್ ಸೇವೆ ರದ್ದು 

ಏಜೆನ್ಸೀಸ್
Published 12 ಆಗಸ್ಟ್ 2019, 14:13 IST
Last Updated 12 ಆಗಸ್ಟ್ 2019, 14:13 IST
   

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷಾಧಿಕಾರ ರದ್ದು ಮಾಡಿದ್ದಕ್ಕಾಗಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಲು ಪಾಕಿಸ್ತಾನ ತೀರ್ಮಾನಿಸಿದ ಬೆನ್ನಲ್ಲೇ ದೆಹಲಿ- ಲಾಹೋರ್ ಬಸ್ ಸೇವೆ ರದ್ದಾಗಿದೆ.

ಸೋಮವಾರದಿಂದ ಬಸ್ ಸೇವೆ ರದ್ದುಗೊಳಿಸುವುದಾಗಿ ಪಾಕಿಸ್ತಾನದ ಹಿರಿಯ ಸಚಿವರು ಶನಿವಾರ ಹೇಳಿದ್ದರು.ಸೋಮವಾರ ಬೆಳಗ್ಗೆ 6 ಗಂಟೆಗೆ ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಬಸ್ ಲಾಹೋರ್‌ಗೆ ಹೊರಡುವುದು ನಿಗದಿಯಾಗಿತ್ತು. ಆದರೆ ಬಸ್ ಸೇವೆ ರದ್ದುಗೊಳಿಸುವುದಾಗಿ ಪಾಕ್ ನಿರ್ಧರಿಸಿದ್ದರಿಂದ ಬಸ್ ಹೊರಡಲಿಲ್ಲ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೆಹಲಿ- ಲಾಹೋರ್ ಬಸ್ ಸೇವೆ ಸ್ಥಗಿತಗೊಳಿಸುವ ಪಾಕ್ ನಿರ್ಧಾರದ ಹಿನ್ನೆಲೆಯಲ್ಲಿಆಗಸ್ಟ್ 12ರಂದು ಡಿಟಿಸಿಬಸ್ ಕಳುಹಿಸಿಲ್ಲ ಎಂದು ಡಿಟಿಸಿ ಹೇಳಿಕೆ ನೀಡಿದೆ.

ADVERTISEMENT

ಪಾಕಿಸ್ತಾನದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶನಿವಾರ ಡಿಟಿಸಿಗೆ ಫೋನ್ ಕರೆ ಮಾಡಿ ಬಸ್ ಸೇವೆ ರದ್ದು ಮಾಡುವ ತೀರ್ಮಾನ ತಿಳಿಸಿತ್ತು.

ಶನಿವಾರ ದೆಹಲಿಯಿಂದ ಲಾಹೋರ್‌ಗಿರುವ ಕೊನೆಯ ಬಸ್ ಸಂಚಾರ ನಡೆಸಿತ್ತು.ಬಸ್ ಆ ಕಡೆ ಹೋಗುವಾಗ ಇಬ್ಬರು ಪ್ರಯಾಣಿಕರಿದ್ದರು.ಆದರೆ ಸಂಜೆ ಅಲ್ಲಿಂದ ವಾಪಸ್ ಬರುವಾಗ 19 ಪ್ರಯಾಣಿಕರಿದ್ದರು. ಭಾನುವಾರ ಯಾವುದೇ ಬಸ್ ಈ ದಾರಿಯಲ್ಲಿ ಓಡಾಡಿಲ್ಲ.

1999 ಫೆಬ್ರುವರಿಯಲ್ಲಿ ಈ ಬಸ್ ಸೇವೆ ಆರಂಭವಾಗಿದ್ದು 2001ರಲ್ಲಿ ಸಂಸತ್ ಮೇಲೆ ದಾಳಿಯಾದಾಗ ಬಸ್ ಸೇವೆ ರದ್ದು ಮಾಡಲಾಗಿತ್ತು.ಆನಂತರ 2003 ಜುಲೈ ತಿಂಗಳಲ್ಲಿ ಬಸ್ ಸೇವೆ ಪುನರಾರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.