ನವದೆಹಲಿ: ದೆಹಲಿ ಮೆಟ್ರೊದಲ್ಲಿ ನಾಲ್ಕನೇ ಹಂತದಲ್ಲಿ ಅಸ್ವಿತ್ವಕ್ಕೆ ಬರಲಿರುವ ಸ್ವಯಂಚಾಲಿತ ಶುಲ್ಕ ಸಂಗ್ರಹ ಯಂತ್ರದಲ್ಲಿ ದೇಶದಾದ್ಯಂತ ಅಂಗೀಕೃತವಾಗುವ ಏಕರೂಪದ ಕಾರ್ಡ್ ಜತೆಗೆ ಮೊಬೈಲ್ ಫೋನ್ ಬಳಸಿಯೂ ಪ್ರವೇಶ ಪಡೆಯಬಹುದು ಎಂದು ಡಿಎಂಆರ್‌ಸಿ ಮುಖ್ಯಸ್ಥ ಮಂಗುಸಿಂಗ್ ತಿಳಿಸಿದ್ದಾರೆ.
ವಿಶ್ವದ ಇತರೆ ಮೆಟ್ರೊ ಸೇವೆಗೆ ಹೋಲಿಸಿದರೆ ದೆಹಲಿ ಮೆಟ್ರೊ ‘ಆಧುನಿಕ ಮೆಟ್ರೊ ವ್ಯವಸ್ಥೆ’ ಎಂದು ಬಣ್ಣಿಸಿರುವ ಅವರು, ವರ್ಷಾಂತ್ಯದ ವೇಳೆಗೆ ಈ ಎರಡೂ ಸೇವೆಗಳು ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಜಾರಿಗೆ ಬರಲಿವೆ ಎಂದಿದ್ದಾರೆ.
ಏಕರೂಪದ ಕಾರ್ಡ್ (ಎನ್‌ಸಿಎಂಸಿ) ಅನ್ನು ಪ್ರದಾನಿ ನರೇಂದ್ರ ಮೋದಿ 2019ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದರು. ಇದನ್ನು ದೇಶದಾದ್ಯಂತ ಮೆಟ್ರೊ ಮತ್ತು ಬಸ್ ಸೇವೆಗೆ ಬಳಸಬಹುದಾಗಿದೆ. ‘ಒಂದು ರಾಷ್ಟ್ರ, ಒಂದು ಕಾರ್ಡ್’ ಎಂದು ಹೇಳಲಾಗಿದ್ದ ಈ ಕಾರ್ಡ್ ಅನ್ನು ಬಳಕೆದಾರರು ಟೋಲ್ ಪಾವತಿ, ಪಾರ್ಕಿಂಗ್ ನಿಲುಗಡೆ ಶುಲ್ಕ, ಖಾತೆಯಿಂದ ಹಣವನ್ನು ಹಿಂತೆಗೆಯಲು ಬಳಸಬಹುದು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.