ನವದೆಹಲಿ (ಪಿಟಿಐ): ಪ್ರವಾಹದ ನೀರು ವನ್ಯಜೀವಿಗಳ ಬಿಲ ಹಾಗೂ ಅಡಗು ಸ್ಥಾನಗಳಿಗೆ ನುಗ್ಗುತ್ತಿರುವುದರಿಂದ ಅವು ಅಲ್ಲಿಂದ ಹೊರಬರುತ್ತಿವೆ. ಹೀಗಾಗಿ, ದೆಹಲಿ ನಗರದಾದ್ಯಂತ ಸರೀಸೃಪಗಳು ಹೆಚ್ಚಾಗಿ ಕಂಡುಬರುತ್ತಿವೆ.
ಮುಂಗಾರಿನಲ್ಲಿ ಮೆಟ್ರೊ ನಿಲ್ದಾಣ, ಸರ್ಕಾರಿ ಕಚೇರಿಗಳಿಂದ ಹಿಡಿದು ವಸತಿ ಪ್ರದೇಶಗಳವರೆಗೆ ವನ್ಯಜೀವಿಗಳನ್ನು ರಕ್ಷಿಸುವಂತೆ ಕೋರಿ ಬರುವ ಕರೆಗಳ ಸಂಖ್ಯೆ ಹೆಚ್ಚಾಗಿದೆ.
ಮಯೂರ್ ವಿಹಾರ್–1 ಮೆಟ್ರೊ ನಿಲ್ದಾಣದಲ್ಲಿ ಶುಕ್ರವಾರ ಉಡವೊಂದು ಕಂಡುಬಂದಿದ್ದು, ಅದನ್ನು ಹಿಡಿದು ರಕ್ಷಿಸುವಂತೆ ಮೆಟ್ರೊ ಸಿಬ್ಬಂದಿಯು ವೈಲ್ಡ್‌ಲೈಫ್ ಎಸ್‌ಒಎಸ್ ಸಂಸ್ಥೆಗೆ ಕರೆ ಮಾಡಿ ಮನವಿ ಮಾಡಿದ್ದರು. ಸಂಸ್ಥೆಯ ತಂಡವು ಸ್ಥಳಕ್ಕೆ ಧಾವಿಸಿ ಉಡವನ್ನು ರಕ್ಷಿಸಿತು. ಅದನ್ನು ಕಾಡಿಗೆ ಬಿಡುವ ಮುನ್ನ ಆರೋಗ್ಯ ತಪಾಸಣೆ ನಡೆಸಿತು.
‘ಭಾರಿ ಮಳೆ ಹಾಗೂ ಪ್ರವಾಹ ಸರೀಸೃಪಗಳನ್ನು ನೈಸರ್ಗಿಕ ಆವಾಸ ಸ್ಥಾನಗಳಿಂದ ಹೊರಹಾಕುತ್ತವೆ. ಅವು ಮಾನವನ ವಾಸ ಸ್ಥಳಗಳನ್ನು ಆಶ್ರಯಿಸಿ ಬರುತ್ತವೆ. ಉಡಗಳು ನಿರುಪದ್ರವಿ ಜೀವಿಗಳು ಹಾಗೂ ಪರಿಸರ ವ್ಯವಸ್ಥೆಗೆ ಪ್ರಮುಖವಾಗಿ ಬೇಕಾದವು. ಆದರೆ, ಭಯದ ಕಾರಣ, ಅವು ಅಪಾಯಕಾರಿ ಎಂದು ಜನರು ತಪ್ಪಾಗಿ ಭಾವಿಸುತ್ತಾರೆ’ ಎಂದು ವೈಲ್ಡ್‌ಲೈಫ್ ಎಸ್‌ಒಎಸ್ ಸಿಇಒ ಕಾರ್ತಿಕ್ ಸತ್ಯನಾರಾಯಣ್ ತಿಳಿಸಿದ್ದಾರೆ.
ವನ್ಯಜೀವಿಗಳ ಅಡಗು ತಾಣಗಳಿಗೆ ನುಗ್ಗುತ್ತಿದೆ ಮಳೆನೀರು ಆವಾಸ ಸ್ಥಾನಗಳಿಂದ ಹೊರಬರುತ್ತಿರುವ ಸರೀಸೃಪಗಳು ರಕ್ಷಣೆ ಕೋರಿ ವೈಲ್ಡ್‌ಲೈಫ್ ಎಸ್‌ಒಎಸ್ ಸಂಸ್ಥೆಗೆ ಕರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.