ADVERTISEMENT

ಗಾಜಿಪುರದಲ್ಲಿ ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸ್: ಎಸ್‌ಕೆಎಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2022, 9:48 IST
Last Updated 22 ಆಗಸ್ಟ್ 2022, 9:48 IST
ಜಂತರ್‌ ಮಂತರ್‌ನಲ್ಲಿ ಆಯೋಜನೆಯಾಗಿರುವ ಮಹಾಪಂಚಾಯಿತಿಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದು. (ಪಿಟಿಐ ಚಿತ್ರ)
ಜಂತರ್‌ ಮಂತರ್‌ನಲ್ಲಿ ಆಯೋಜನೆಯಾಗಿರುವ ಮಹಾಪಂಚಾಯಿತಿಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದು. (ಪಿಟಿಐ ಚಿತ್ರ)   

ನವೆದಹಲಿ: ದೆಹಲಿ ಹಾಗೂ ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದುಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಕಿಡಿಕಾರಿದೆ.

ಎಸ್‌ಕೆಎಂ ಕರೆ ನೀಡಿರುವ ಹಾಗೂ ಜಂತರ್ ಮಂತರ್‌ನಲ್ಲಿ ಸೋಮವಾರ ಆಯೋಜಿಸಲಾಗಿರುವ 'ಕಿಸಾನ್‌ ಮಹಾಪಂಚಾಯಿತಿ' ಹಿನ್ನೆಲೆಯಲ್ಲಿ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ರೈತರು ಆಗಮಿಸಿದ್ದಾರೆ.

ರೈತರು ಜಂತರ್‌ ಮಂತರ್‌ ತಲುಪದಂತೆಕೆಲವು ಸ್ಥಳಗಳಲ್ಲಿ ತಡೆಯಲಾಗಿದೆ ಎಂದು ಎಸ್‌ಕೆಎಂ ನಾಯಕರು ಆರೋಪಿಸಿದ್ದಾರೆ. ಆದರೆ, ಇದನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.

ADVERTISEMENT

'ಮಹಾಪಂಚಾಯಿತಿ,ಕನಿಷ್ಠ ಬೆಂಬಲ ಬೆಲೆ ನೀತಿಗೆ ಕಾನೂನಾತ್ಮಕಖಾತರಿ, ವಿದ್ಯುತ್‌ ತಿದ್ದುಪಡಿ ಮಸೂದೆ–2022 ರದ್ದು ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಸುತ್ತಿರುವ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದೆ' ಎಂದು ಎಸ್‌ಕೆಎಂ ಸದಸ್ಯ ಹಾಗೂ ಮಹಾಪಂಚಾಯತ್‌ ಸಂಘಟಕ ಅಭಿಮನ್ಯು ಸಿಂಗ್‌ ಕೊಹರ್‌ ಹೇಳಿದ್ದಾರೆ.

ರೈತರು ಪಂಜಾಬ್‌, ಹರಿಯಾಣ, ಉತ್ತರಪ್ರದೇಶದಿಂದ ಆಗಮಿಸಿರುವ ರೈತರನ್ನು ಭಾನುವಾರ ರಾತ್ರಿಯೇ ತಡೆಯಲಾಗಿದ್ದು, ಜಂತರ್‌ ಮಂತರ್‌ಗೆ ತಲುಪಲು ಅವಕಾಶ ನಿರಾಕರಿಸಲಾಗಿದೆ. ಅವರನ್ನು (ರೈತರನ್ನು) ಗುರುದ್ವಾರದ ಬಂಗ್ಲಾ ಸಾಹೀಬ್‌, ರಾಕಬ್‌ಗಂಜ್‌ ಹಾಗೂ ಮೋತಿ ಬಾಗ್‌ಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಗಿದೆ ಎಂದುಅಭಿಮನ್ಯು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.