ADVERTISEMENT

ದೆಹಲಿಯಲ್ಲಿನ ಇಸ್ರೇಲ್‌ ರಾಯಭಾರ ಕಚೇರಿ ಭದ್ರತೆ ಪರಿಶೀಲನೆ

ಪಿಟಿಐ
Published 3 ಆಗಸ್ಟ್ 2024, 16:01 IST
Last Updated 3 ಆಗಸ್ಟ್ 2024, 16:01 IST
<div class="paragraphs"><p>ಇಸ್ರೇಲ್ ರಾಯಭಾರ ಕಚೇರಿ ಬಳಿ ಫೋರೆನ್ಸಿಕ್ ಮತ್ತು  ಭದ್ರತಾ ಅಧಿಕಾರಿಗಳು</p></div>

ಇಸ್ರೇಲ್ ರಾಯಭಾರ ಕಚೇರಿ ಬಳಿ ಫೋರೆನ್ಸಿಕ್ ಮತ್ತು ಭದ್ರತಾ ಅಧಿಕಾರಿಗಳು

   

(ಚಿತ್ರ ಕೃಪೆ–ಪಿಟಿಐ)

ನವದೆಹಲಿ: ಟೆಹ್ರಾನ್‌ನಲ್ಲಿ ಹಮಾಸ್‌ ಬಂಡುಕೋರರ ನಾಯಕನ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳ ಎಚ್ಚರಿಕೆಯ ಮೇರೆಗೆ ದೆಹಲಿ ಪೊಲೀಸರು ಇಸ್ರೇಲ್‌ ರಾಯಭಾರ ಕಚೇರಿ ಮತ್ತು ಚಾಬಾದ್‌ ಹೌಸ್‌ನ ಭದ್ರತೆ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.

ADVERTISEMENT

ಜುಲೈ 31ರಂದು ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ನೆಲೆಸಿದ್ದ ನಿವಾಸ ಗುರಿಯಾಗಿಸಿ ಇಸ್ರೇಲ್‌ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹನಿಯೆ ಮತ್ತು ಅವರ ಅಂಗರಕ್ಷಕ ಹತರಾಗಿದ್ದರು. 

ಮೂಲಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿರುವ ಎರಡು ಇಸ್ರೇಲಿ ಕಟ್ಟಡಗಳ ಸುತ್ತಲೂ ಬೃಹತ್ ಭದ್ರತಾ ಜಾಲ ಹೆಣೆಯಲು  ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ.

ಎರಡೂ ಕಟ್ಟಡಗಳ ಸುತ್ತಲೂ ಹಲವು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಬಹು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬಹುದು ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.