ADVERTISEMENT

ದೆಹಲಿ ವಿಧಾನಸಭೆ ಚುನಾವಣೆ| ₹2ಕ್ಕೆ ಒಂದು ಕೆ.ಜಿ ಗೋಧಿ ಹಿಟ್ಟು: ಬಿಜೆಪಿ ಭರವಸೆ

ಪಿಟಿಐ
Published 31 ಜನವರಿ 2020, 20:00 IST
Last Updated 31 ಜನವರಿ 2020, 20:00 IST
   

ನವದೆಹಲಿ: ದೆಹಲಿ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಎರಡು ರೂಪಾಯಿಗೆ ಒಂದು ಕೆ.ಜಿ ಗೋಧಿ ಹಿಟ್ಟು ಮತ್ತು ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ನೀಡುವ ಭರವಸೆ ನೀಡಿದೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಕಾಶ್‌ ಜಾವಡೇಕರ್‌, ಹರ್ಷ್‌ವರ್ಧನ್‌ ಮತ್ತು ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್‌ ತಿವಾರಿ ಮತ್ತು ಹಲವು ಸಂಸದರ ಸಮ್ಮುಖದಲ್ಲಿ ‘ದೆಹಲಿ ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಗಡ್ಕರಿ, ‘ದೆಹಲಿಯ ಅಭಿವೃದ್ಧಿಯನ್ನು ‘ಬುಲೆಟ್‌ ರೈಲಿ’ನ ವೇಗದಲ್ಲಿ ಮಾಡಲಾಗುವುದು. ಬಿಜೆಪಿಯ ಇತಿಹಾಸ ದೆಹಲಿಯೊಂದಿಗೆ ಕೂಡಿಕೊಂಡಿದೆ. ದೆಹಲಿಯ ಭವಿಷ್ಯವನ್ನು ಬದಲಾಯಿಸಲಾಗುವುದು’ ಎಂದರು.

ADVERTISEMENT

ನಿರುದ್ಯೋಗದ ಕುರಿತು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಉದ್ಯೋಗ ಪ್ರಮಾಣವನ್ನು ಹೆಚ್ಚಿಸಲು, ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದಿದೆ.

ಜತೆಗೆ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ, ಆಯುಷ್ಮಾನ್‌ ಭಾರತ್‌ ಮತ್ತು ಕಿಸಾನ್‌ ಸಮ್ಮಾನ್‌ ನಿಧಿಯನ್ನು ಜಾರಿ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.