ADVERTISEMENT

ದೆಹಲಿ: ಕಳೆದ 6 ವರ್ಷಗಳಲ್ಲೇ ಅತ್ಯಧಿಕ ಡೆಂಗ್ಯೂ ಪ್ರಕರಣ ಪತ್ತೆ

ಪಿಟಿಐ
Published 15 ನವೆಂಬರ್ 2021, 12:57 IST
Last Updated 15 ನವೆಂಬರ್ 2021, 12:57 IST
ದೆಹಲಿಯಲ್ಲಿ ಡೆಂಗ್ಯೂ
ದೆಹಲಿಯಲ್ಲಿ ಡೆಂಗ್ಯೂ   

ನವದೆಹಲಿ: ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಕಳೆದ ಆರು ವರ್ಷಗಳಲ್ಲೇ ಪ್ರಸಕ್ತ ಸಾಲಿನಲ್ಲಿ ಅತ್ಯಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ನಗರಪಾಲಿಕೆಯ ವರದಿ ತಿಳಿಸಿದೆ.

ದೆಹಲಿಯಲ್ಲಿ ನವೆಂಬರ್ 13ರ ವರೆಗೆ 5,277 ಡೆಂಗ್ಯೂ ಪ್ರಕರಗಣಳು ಪತ್ತೆಯಾಗಿವೆ. ಇದು 2015ರ ಬಳಿಕ ವರ್ಷವೊಂದರಲ್ಲಿ ದಾಖಲಾದ ಗರಿಷ್ಠ ಡೆಂಗ್ಯೂ ಪ್ರಕರಣ ಎಂದು ತಿಳಿಸಿದೆ.

ಇದನ್ನೂ ಓದಿ:

ನಗರದಲ್ಲಿ ಕಳೆದೊಂದು ವಾರದಲ್ಲೇ 2,570 ಪ್ರಕರಣಗಳು ಉಲ್ಬಣಗೊಂಡಿದೆ. ಆದರೆ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ.

ADVERTISEMENT

ದೆಹಲಿಯಲ್ಲಿ ದಾಖಲಾದ ಡೆಂಗ್ಯೂ ಪ್ರಕರಣ ಸಂಖ್ಯೆ:
2016: 4,431
2017: 4,726
2018: 2,798
2019: 2,036
2020: 1,072

ಇನ್ನೂ 2015ರಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಾತ್ರವಾಗಿ 10,600ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿತ್ತು. ಇದು 1996ರಿಂದ ದೆಹಲಿಯಲ್ಲಿ ಉಲ್ಬಣಗೊಂಡ ಅತ್ಯಧಿಕ ಪ್ರಕರಣಗಳ ಸಂಖ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.