
ಪಿಟಿಐ
ದೆಹಲಿ ಸ್ಫೋಟ
(ಪಿಟಿಐ ಚಿತ್ರ)
ನವದೆಹಲಿ: ಎನ್‌ಐಎ ಕಚೇರಿಯಲ್ಲಿ ತನ್ನ ವಕೀಲರೊಂದಿಗೆ ಮಾತನಾಡಲು ಅನುಮತಿ ನೀಡುವಂತೆ ಕೋರಿ ದೆಹಲಿ ಕಾರು ಸ್ಪೋಟ ಪ್ರಕರಣದ ಆರೋಪಿ ಜಸೀರ್ ಬಿಲಾಲ್ ವನಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
‘ತನ್ನ ಮನವಿಯನ್ನು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಲ್ಲಿ ಅರ್ಜಿದಾರರು ವಿಫಲಾಗಿದ್ದಾರೆ. ಅವರೇನೂ ವಿಶೇಷ ವ್ಯಕ್ತಿಯಲ್ಲ. ನ್ಯಾಯಾಂಗದ ನಿರ್ದಿಷ್ಟ ಪ್ರಕ್ರಿಯೆಯನ್ನು ಎಲ್ಲರೂ ಪಾಲಿಸಬೇಕು’ ಎಂದು ನ್ಯಾಯಮೂರ್ತಿ ಸ್ವರಣಕಾಂತ ಶರ್ಮ ಅವರು ತಿಳಿಸಿದ್ದಾರೆ.
ವನಿ ಅವರ ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ಮೌಖಿಕವಾಗಿ ನಿರಾಕರಿಸಿತ್ತು ಎಂದು ವನಿ ಪರ ವಕೀಲರು ನ್ಯಾಯಾಲಯಕ್ಕೆ ಅರುಹಿದ್ದರು.
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಸ್ಫೋಟದ ಸಹ ಸಂಚುಕೋರ ಎನ್ನಲಾದ ವನಿಯನ್ನು ನವೆಂಬರ್ 17ರಂದು ಎನ್‌ಐಎ ಬಂಧಿಸಿತ್ತು. ಬಳಿಕ ಆತನನ್ನು 10 ದಿನ ಎನ್‌ಐಎ ಕಸ್ಟಡಿಗೆ ನೀಡಲಾಗಿತ್ತು.