ADVERTISEMENT

ದೆಹಲಿ ಮೆಟ್ರೊ ಸ್ಟೇಷನ್ ಸಮೀಪ ಭೂಕುಸಿತ: ಮಣ್ಣಿನಲ್ಲಿ ಸಿಲುಕಿತು ಕಾರು, ಆಟೊ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 2:28 IST
Last Updated 15 ಜನವರಿ 2019, 2:28 IST
   

ನವದೆಹಲಿ:ವಾಹನದಟ್ಟಣೆ ಹೆಚ್ಚಾಗಿರುವ ದೆಹಲಿಯ ರಸ್ತೆಯೊಂದರಲ್ಲಿ ಸೋಮವಾರ ಸಂಜೆ ಭೂಕುಸಿತ ಸಂಭವಿಸಿದ್ದು ಕಾರು ಮತ್ತು ಆಟೊರಿಕ್ಷಾ ಮಣ್ಣಿನಡಿ ಸಿಲುಕಿದವು. ಮೆಟ್ರೊ ಸ್ಟೇಷನ್‌ ಕೆಳಗೇ ಭೂಕುಸಿತ ಸಂಭವಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪೂರ್ವ ದೆಹಲಿಯ ಶಾಹ್‌ದಾರಾ ಬಳಿ ಇರುವ ಮೌಜ್‌ಪುರ್–ಬಾಬರ್‌ಪುರ್ ಮೆಟ್ರೊಸ್ಟೇಷನ್‌ ಸಮೀಪ ದುರ್ಘಟನೆ ಸಂಭವಿಸಿದೆ. ಮಣ್ಣಿನಡಿ ಸಿಲುಕಿದ್ದ ಕಾರಿನಲ್ಲಿದ್ದ ಇಬ್ಬರುಮತ್ತು ಆಟೊದಲ್ಲಿದ್ದ ಓರ್ವ ವ್ಯಕ್ತಿಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ವಾಹನಗಳಲ್ಲಿ ಸಿಲುಕಿದ್ದ ಅವರನ್ನು ಸಾರ್ವಜನಿಕರುಹೊರಗೆಳೆದು ರಕ್ಷಿಸಿದರು.

ಘಟನಾ ಸ್ಥಳದಲ್ಲಿ ಅಪಾರ ಜನಸಂದಣಿ ಸೇರಿತ್ತು. ರಸ್ತೆಯ ಮಧ್ಯೆ ಕಾಣಿಸಿಕೊಂಡಿರುವ ದೊಡ್ಡ ಗುಂಡಿಯನ್ನು ಮುಚ್ಚಲುಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.