ADVERTISEMENT

ಈ ವಿದ್ಯಾರ್ಥಿನಿ ಬೀದಿ ನಾಯಿಗಳಿಗೆ ಕೊರಳುಪಟ್ಟಿ ಕಟ್ಟುವುದು ಯಾಕೆ ಗೊತ್ತೇ?

ಏಜೆನ್ಸೀಸ್
Published 10 ಅಕ್ಟೋಬರ್ 2020, 6:49 IST
Last Updated 10 ಅಕ್ಟೋಬರ್ 2020, 6:49 IST
ಬೀದಿ ನಾಯಿಗಳಿಗೆ ಕೊರಳಪಟ್ಟಿ ಕಟ್ಟುತ್ತಿರುವ ವಿದ್ಯಾರ್ಥಿನಿ
ಬೀದಿ ನಾಯಿಗಳಿಗೆ ಕೊರಳಪಟ್ಟಿ ಕಟ್ಟುತ್ತಿರುವ ವಿದ್ಯಾರ್ಥಿನಿ   

ನವದೆಹಲಿ: ಇಲ್ಲಿನ ಪಶು ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಬೀದಿ ನಾಯಿಗಳಿಗೆ ಆಹಾರ ನೀಡುವುದು ಮತ್ತು ಅವುಗಳ ಕುತ್ತಿಗೆಗೆ ಪ್ರತಿಫಲಿತ ಕೊರಳುಪಟ್ಟಿ ಕಟ್ಟುವಂತಹ ಉದಾತ್ತ ಕಾರ್ಯವನ್ನು ಮಾಡುತ್ತಿದ್ದಾರೆ.

ರಾತ್ರಿ ಸಮಯದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ನಾಯಿಗಳು ಬಲಿಯಾಗುವುದನ್ನು ತಡೆಯಲು ಪ್ರತಿಫಲಿತ ಕೊರಳುಪಟ್ಟಿಗಳನ್ನು ವಿನ್ಯಾಸ ಮಾಡಿರುವುದಾಗಿ ವಿದ್ಯಾರ್ಥಿನಿ ಚಾತ್ರಾ ತಿಳಿಸಿದ್ದಾರೆ.

'ಲಾಕ್‌ಡೌನ್ ವೇಳೆ ರಸ್ತೆಗಳಲ್ಲಿ ಯಾವುದೇ ವಾಹನ ಓಡಾಡುತ್ತಿರಲಿಲ್ಲ. ಈಗ ವಾಹನಗಳು ಮತ್ತೆ ರಸ್ತೆಗಿಳಿದಿವೆ. ನಾಯಿಗಳ ಕುತ್ತಿಗೆಗೆ ಪ್ರತಿಫಲಿತ ಕೊರಳಪಟ್ಟಿ ಕಟ್ಟುವುದರಿಂದ ವಾಹನ ಚಾಲಕರು ದೂರದಿಂದಲೇ ಇದನ್ನು ನೋಡಬಹುದು. ಇದರಿಂದ ಅಪಘಾತಗಳಾಗುವುದನ್ನು ತಪ್ಪಿಸಿ, ನಾಯಿಗಳ ಜೀವ ಉಳಿಸಬಹುದು' ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.