ADVERTISEMENT

ದೆಹಲಿ ವಕ್ಫ್ ಮಂಡಳಿ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾಗೆ ಜಾಮೀನು ಮಂಜೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2024, 6:26 IST
Last Updated 27 ಏಪ್ರಿಲ್ 2024, 6:26 IST
<div class="paragraphs"><p>ಅಮಾನತುಲ್ಲಾ ಖಾನ್</p></div>

ಅಮಾನತುಲ್ಲಾ ಖಾನ್

   

(ಪಿಟಿಐ ಚಿತ್ರ)

ನವದೆಹಲಿ: ದೆಹಲಿ ವಕ್ಫ್‌ ಮಂಡಳಿಯಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂಬ ಆರೋಪದಡಿ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ADVERTISEMENT

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ದಿವ್ಯ ಮಲ್ಹೋತ್ರ ಅವರು,  ₹15 ಸಾವಿರದ ವೈಯುಕ್ತಿಕ ಬಾಂಡ್‌ ಮತ್ತು ಒಂದು ಶ್ಯೂರಿಟಿಯ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದರೂ ವಕ್ಫ್‌ ಮಂಡಳಿ ಅಧ್ಯಕ್ಷ ಅಮಾನತುಲ್ಲಾ ಖಾನ್‌ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿತ್ತು.

‘ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಮತ್ತು ವಿಚಾರಣೆಗೆ ಗೈರಾಗುವ ಮೂಲಕ ಖಾನ್‌ ಸಾಕ್ಷಿದಾರನಿಂದ ಆರೋಪಿ ಸ್ಥಾನಕ್ಕೆ ಬಂದಿದ್ದಾರೆ’ ಎಂದು ಇ.ಡಿ ಆರೋಪಿಸಿದೆ.

ವಕ್ಫ್ ಬೋರ್ಡ್‌ ಹೆಸರಲ್ಲಿ ಅಕ್ರಮವಾಗಿ ಆಸ್ತಿ ಖರೀದಿ, ಗುತ್ತಿಗೆ ಹಂಚಿಕೆ ಮತ್ತು ನೌಕರರ ನೇಮಕಾತಿ ನಡೆದಿದೆ ಎಂಬ ಆರೋಪದಡಿ ಖಾನ್ ಮತ್ತು ಇತರರ ಮೇಲೆ  ಇ.ಡಿ ದೂರು ದಾಖಲಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.