ADVERTISEMENT

ದೆಹಲಿಯ ವಾಯುಮಾಲಿನ್ಯ ಪ್ರಮಾಣ ಹೆಚ್ಚಳ: ಹವಾಮಾನ ಇಲಾಖೆ

ಏಜೆನ್ಸೀಸ್
Published 20 ನವೆಂಬರ್ 2018, 5:15 IST
Last Updated 20 ನವೆಂಬರ್ 2018, 5:15 IST
   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಹಿಂದಿನ ದಿನಗಳಿಗೆ ಹೋಲಿಸಿದರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಇನ್ನೆರಡು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಶನಿವಾರ ವಾಯು ಗುಣಮಟ್ಟ ಸೂಚ್ಯಂಕ 267 (AQI) ಇದ್ದು,ಭಾನುವಾರದ ವೇಳೆಗೆ ಸೂಚ್ಯಂಕ 311ಕ್ಕೆ ಏರಿಕೆಯಾಗಿದೆ. ಆದ ಕಾರಣ ವಾಯುವಿನ ಗುಣಮಟ್ಟದ ಪ್ರಮಾಣ ತೀರಾ ನಿಕೃಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಗಾಳಿಯಲ್ಲಿ ಅತಿಯಾದ ತೇವಾಂಶ ಇರುವುದೂ ಸಮಸ್ಯೆಗೆ ಕಾರಣವಾಗಿದೆ.ಸ್ಥಳೀಯ ಕೈಗಾರಿಕೆಗಳು ಹೊರಸೂಸುತ್ತಿರುವ ಹೊಗೆಯಿಂದ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸೋಮವಾರ 15.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.

ವಾಯು ಗುಣಮಟ್ಟ ಸೂಚ್ಯಂಕಪ್ರಮಾಣ
0 ಯಿಂದ 5 – ಉತ್ತಮ
51 –100 – ಸಮಾಧಾನಕರ
101 – 200 – ಮಧ್ಯಮ
201 – 300 – ನಿಕೃಷ್ಟ
301 – 400 – ಅತಿ ನಿಕೃಷ್ಟ
401– 500 – ಕಷ್ಟಸಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.