ADVERTISEMENT

ಕೆಂಪುಕೋಟೆ: ಪ್ರವಾಸಿಗರ ಭೇಟಿಗೆ ಹೇರಿದ್ದ ನಿರ್ಬಂಧ ವಾಪಸ್‌

ಪಿಟಿಐ
Published 18 ಫೆಬ್ರುವರಿ 2024, 15:32 IST
Last Updated 18 ಫೆಬ್ರುವರಿ 2024, 15:32 IST
.
.   

ನವದೆಹಲಿ: ರೈತರ ಪ್ರತಿಭಟನೆಯ ಕಾರಣದಿಂದ ಐತಿಹಾಸಿಕ ಕೆಂಪುಕೋಟೆಯ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ವಾಪಸ್‌ ಪಡೆದು, ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.

ಕಳೆದ ಸೋಮವಾರ ರಾತ್ರಿ ಏಕಾಏಕಿ ಸ್ಮಾರಕದ ಬಾಗಿಲುಗಳನ್ನು ಮುಚ್ಚಲಾಗಿತ್ತು. ಎರಡು ದಿನಗಳ ಹಿಂದೆಯೇ ಇದನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ರೈತರು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರಿಂದ ಭದ್ರತಾ ಕಾರಣಕ್ಕಾಗಿ ಕೆಂಪುಕೋಟೆಗೆ ಪ್ರವಾಸಿಗರ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಜೊತೆಗೆ ಪೊಲೀಸ್‌ ಮತ್ತು ಅರೆಸೇನಾ ಪಡೆಯ ಅಪಾರ ಸಂಖ್ಯೆಯ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.