ADVERTISEMENT

ಡೆಲ್ಟಾ ಪ್ಲಸ್‌ ತಳಿಯಿಂದ ಮಹಾರಾಷ್ಟ್ರದಲ್ಲಿ 3ನೇ ಅಲೆ ಸಾಧ್ಯತೆ

ಪಿಟಿಐ
Published 17 ಜೂನ್ 2021, 4:23 IST
Last Updated 17 ಜೂನ್ 2021, 4:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಕೊರೊನಾ ವೈರಸ್‌ನ ‘ಡೆಲ್ಟಾ ಪ್ಲಸ್‌’ ತಳಿಯು ಬಹಳ ಮಾರಕವಾಗಿದ್ದು, ಈ ತಳಿಯಿಂದಾಗಿ ಮಹಾರಾಷ್ಟ್ರದಲ್ಲಿ ಕೋವಿಡ್‌–19ನ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಧವಾರ ಎಚ್ಚರಿಸಿದೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಈ ಕುರಿತ ವರದಿಯನ್ನು ಪ್ರಸ್ತುತಪಡಿಸಿದರು.

‘ಡೆಲ್ಟಾ ಪ್ಲಸ್‌ ತಳಿಯಿಂದಾಗಿ ಅಂದಾಜು 8 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು.ಈ ಪೈಕಿ ಶೇ 10ರಷ್ಟು ಮಕ್ಕಳಿಗೆ ಸೋಂಕು ತಗುಲುವ ಅಪಾಯ ಇದೆ’ ಎಂದು ಅಧಿಕಾರಿಗಳು ವಿವರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.