ADVERTISEMENT

ಜಮ್ಮು: ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕ ಲೋಹಿಯಾ ಕೊಲೆ 

ಪಿಟಿಐ
Published 4 ಅಕ್ಟೋಬರ್ 2022, 2:26 IST
Last Updated 4 ಅಕ್ಟೋಬರ್ 2022, 2:26 IST
   

ಜಮ್ಮು: ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕ ಎಚ್ ಕೆ ಲೋಹಿಯಾ ಅವರು ಸೋಮವಾರ ಜಮ್ಮುವಿನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದಾರೆ.ಅವರ ಮನೆಯ ಸಹಾಯಕನೇಕೊಲೆ ಮಾಡಿರಬಹುದುಎಂದು ಪೊಲೀಸರು ಶಂಕಿಸಿದ್ದಾರೆ.

ಮನೆ ಸಹಾಯಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಆರಂಭಿಸಲಾಗಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ.

1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಲೋಹಿಯಾ ಅವರು ಜಮ್ಮುವಿನ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ನೆಲೆಸಿದ್ದರು. ಅಲ್ಲಿಯೇ ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ADVERTISEMENT

ಅವರನ್ನು ಆಗಸ್ಟ್‌ನಲ್ಲಿ ಕಾರಾಗೃಹಇಲಾಖೆಯಡಿಜಿಪಿಯಾಗಿ ನಿಯೋಜಿಸಲಾಗಿತ್ತು.

'ಅಧಿಕಾರಿಯೊಂದಿಗೆ ಇದ್ದ ಗೃಹ ಸಹಾಯಕ ತಲೆಮರೆಸಿಕೊಂಡಿದ್ದಾನೆ. ಅತನಿಗಾಗಿ ಹುಡುಕಾಟ ಪ್ರಾರಂಭವಾಗಿದೆ' ಎಂದುಎಡಿಜಿಪಿ ಹೇಳಿದ್ದಾರೆ.

ವಿಧಿವಿಜ್ಞಾನ ಮತ್ತು ಅಪರಾಧ ತಂಡಗಳು ಸ್ಥಳಕ್ಕೆ ಧಾವಿಸಿವೆ. ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿ ಸಾವಿಗೆ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆತೀವ್ರ ಬೇಸರ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.