ADVERTISEMENT

‘ಮ್ಯಾಕ್‌ಬುಕ್ ಪ್ರೊ ದೋಷಪೂರಿತ:ವಿಮಾನಗಳಲ್ಲಿ ಕೊಂಡೊಯ್ಯುವಂತಿಲ್ಲ’

ಪ್ರಯಾಣಿಕರಿಗೆ ಡಿಜಿಸಿಎ ಮನವಿ

ಪಿಟಿಐ
Published 26 ಆಗಸ್ಟ್ 2019, 17:09 IST
Last Updated 26 ಆಗಸ್ಟ್ 2019, 17:09 IST
15 ಇಂಚಿನ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌
15 ಇಂಚಿನ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌   

ನವದೆಹಲಿ: ಆ್ಯಪಲ್‌ ಕಂಪನಿಯ 15 ಇಂಚಿನ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳ ಬ್ಯಾಟರಿಯಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ಇವುಗಳನ್ನು ವಿಮಾನ ಪ್ರಯಾಣಿಕರು ತಮ್ಮೊಂದಿಗೆ ಒಯ್ಯಬಾರದು ಎಂದು ವಿಮಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಸೋಮವಾರ ಮನವಿ ಮಾಡಿದೆ.

‘ಹಳೆಯ ಮಾದರಿಯ 15 ಇಂಚಿನ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳ ಬ್ಯಾಟರಿಗಳಲ್ಲಿ ಹೆಚ್ಚು ಶಾಖ ಉಂಟಾಗುತ್ತಿದೆ. ಇದರಿಂದ ಅಗ್ನಿ ಆಕಸ್ಮಿಕ ಸಂಭವಿಸುವ ಅಪಾಯ ಇರುತ್ತದೆ. ದೋಷ ಪತ್ತೆಯಾಗಿರುವ ಲ್ಯಾಪ್‌ಟಾಪ್‌ಗಳು 2015 ಸೆಪ್ಟೆಂಬರ್‌ನಿಂದ 2017ರ ಫೆಬ್ರುವರಿ ಅವಧಿಯಲ್ಲಿ ಮಾರಾಟವಾಗಿವೆ ಎಂದು ಆ್ಯಪಲ್ ತಿಳಿಸಿದೆ’ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘ಆ್ಯಪಲ್ ಕಂಪನಿ, ಬ್ಯಾಟರಿ ಸುರಕ್ಷಿತವಾಗಿದೆ ಎಂದು ಖಾತ್ರಿ ನೀಡುವವರೆಗೆ ಅಥವಾ ಬ್ಯಾಟರಿ ಬದಲಿಸುವವರೆಗೆ ಈ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಕೊಂಡೊಯ್ಯುವಂತಿಲ್ಲ’ ಎಂದು ಡಿಜಿಸಿಎ ಹೇಳಿದೆ.

ADVERTISEMENT

ಬ್ಯಾಟರಿ ಸಮಸ್ಯೆ ಕುರಿತು ‘ಆ್ಯಪಲ್’ ಜೂನ್ 20ರಂದು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿತ್ತು.

‘ದೋಷವುಳ್ಳ ಬ್ಯಾಟರಿಗಳನ್ನು ಉಚಿತವಾಗಿ ಬದಲಿಸಿಕೊಡಲು ಕಂಪನಿ ಸ್ವಯಂಪ್ರೇರಿತವಾಗಿ ನಿರ್ಧರಿಸಿದೆ. ಲ್ಯಾಪ್‌ಟಾಪ್‌ಗಳ ಸೀರಿಯಲ್ ನಂಬರ್ ಆಧರಿಸಿ, ಬದಲಿ ಬ್ಯಾಟರಿ ನೀಡಲಾಗುವುದು’ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.