ಬೋಯಿಂಗ್ ವಿಮಾನ–
ನವದೆಹಲಿ: ಬೋಯಿಂಗ್ 787 ಡ್ರೀಮ್‌ಲೈನರ್ ಸರಣಿಯ ವಿಮಾನಗಳನ್ನು ತಕ್ಷಣವೇ ವಿಸ್ತೃತ ಸುರಕ್ಷತಾ ತಪಾಸಣೆಗೆ ಒಳಪಡಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬೋಯಿಂಗ್ 787–8, ಮತ್ತು 787–9 ಮಾದರಿಯ ವಿಮಾನಗಳಲ್ಲಿ ಹೆಚ್ಚುವರಿ ಸುರಕ್ಷತಾ ತಪಾಸಣೆ ನಡೆಸಿ, ಹಾರಾಟಕ್ಕೆ ತಾಂತ್ರಿಕವಾಗಿ ಸಂಪೂರ್ಣ ಸಜ್ಜುಗೊಳಿಸಬೇಕು. ಈ ವಿಮಾನಗಳಲ್ಲಿ ಬಳಸುವ ‘ಜೆನೆಕ್ಸ್’ ಎಂಜಿನ್‌ನ ಕಾರ್ಯಕ್ಷಮತೆಯನ್ನೂ ಪರಿಶೀಲಿಸಬೇಕು‘ ಎಂದು ‘ಡಿಜಿಸಿಎ’ ನಿರ್ದೇಶಿಸಿದೆ.
ಬೋಯಿಂಗ್ ಡ್ರೀಮ್‌ಲೈನರ್ ಸರಣಿಯ ವಿಮಾನಗಳಲ್ಲಿ ಜೆಇ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಸುಧಾರಿತ ತಂತ್ರಜ್ಞಾನದ ‘ಜೆನೆಕ್ಸ್’ ಎಂಜಿನ್ ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.