ADVERTISEMENT

ಜಾರ್ಖಂಡ್‌ ನ್ಯಾಯಾಧೀಶರಿಗೆ ಉದ್ದೇಶಪೂರ್ವಕ ಡಿಕ್ಕಿ: ಕೋರ್ಟ್‌‌ಗೆ ಸಿಬಿಐ ಹೇಳಿಕೆ

ಪಿಟಿಐ
Published 23 ಸೆಪ್ಟೆಂಬರ್ 2021, 16:02 IST
Last Updated 23 ಸೆಪ್ಟೆಂಬರ್ 2021, 16:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಂಚಿ (ಪಿಟಿಐ): ಧನ್‌ಬಾದ್ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಉತ್ತಮ್‌ ಆನಂದ್ ಅವರಿಗೆ ಆಟೊ ಚಾಲಕ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿದ್ದ ಎಂದು ಸಿಬಿಐ ಗುರುವಾರ ಜಾರ್ಖಂಡ್‌ ಹೈಕೋರ್ಟ್‌ಗೆ ಹೇಳಿಕೆ ನೀಡಿತು.

ಶಂಕಾಸ್ಪದ ಸಾವಿನ ಪ್ರಕರಣ ಸಂಬಂಧ ಆಟೊಚಾಲಕನನ್ನು ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು, ನ್ಯಾಯಾಧೀಶರ ಸಾವಿನ ಪ್ರಕರಣದಲ್ಲಿ ಭಾಗಿಯಾದವರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಹೇಳಿದರು.

ನ್ಯಾಯಾಧೀಶ, 49 ವರ್ಷದ ಉತ್ತಮ್‌ ಆನಂದ್‌ ಅವರು ಜುಲೈ 28ರ ಮುಂಜಾನೆ ಜಾಗಿಂಗ್‌ಗೆ ಹೋಗಿದ್ದಾಗ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆಟೊರಿಕ್ಷಾ ಡಿಕ್ಕಿ ಹೊಡೆದಿದ್ದುದು ಬಳಿಕ ಗೊತ್ತಾಗಿತ್ತು.

ADVERTISEMENT

ಸಿಬಿಐ ವಲಯ ಜಂಟಿ ನಿರ್ದೇಶಕ ಶರದ್ ಅಗರವಾಲ್ ಅವರು, ‘ನ್ಯಾಯಾಧೀಶರ ಸಾವು ಅಪಘಾತವಲ್ಲ. ಅವರ ಸಾವಿನ ಹಿಂದಿನ ಸತ್ಯ ತಿಳಿಯಲು ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ’ ಎಂದು ಹೇಳಿದರು.

‘ಈ ಕೃತ್ಯ ನ್ಯಾಯಾಂಗದ ನೈತಿಕತೆಯನ್ನು ಕುಂದಿಸಿದೆ. ತನಿಖೆ ವಿಳಂಬವಾದಷ್ಟೂ ಸತ್ಯ ತಿಳಿಯುವುದು ಕಷ್ಟವಾಗಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ರವಿ ರಂಜನ್, ನ್ಯಾಯಮೂರ್ತಿ ಸುಜಿತ್‌ ನಾರಾಯಣ್‌ ಪ್ರಸಾದ್‌ ಅವರಿದ್ದ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.