ADVERTISEMENT

ಟ್ವಿಟರ್ ಪ್ರೊಫೈಲ್‌ನಿಂದ ‘ಬಿಜೆಪಿ’ಯನ್ನು ತೆಗೆದರೇ‌ ಜ್ಯೋತಿರಾದಿತ್ಯ ಸಿಂಧಿಯಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2020, 14:20 IST
Last Updated 6 ಜೂನ್ 2020, 14:20 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ   

ನವದೆಹಲಿ:ಕಾಂಗ್ರೆಸ್ ಜೊತೆಗಿನ 18 ವರ್ಷಗಳ ಸಂಬಂಧವನ್ನು ಕಡಿದುಕೊಂಡು, ಕಳೆದ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶನಿವಾರ ಟ್ವಿಟರ್‌ನಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದರು.

ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್‌ನಿಂದ "ಬಿಜೆಪಿ" ಎಂಬ ಅಂಶವನ್ನೇ ಅವರು ತೆಗೆದುಹಾಕಿದ್ದಾರೆ ಎಂಬ ಸುದ್ದಿ ಭಾರಿ ಸದ್ದಾಗಿತ್ತು. ಇದೇ ವಿಚಾರ ಟ್ವಿಟರ್‌ನಲ್ಲಿ ಶನಿವಾರ ದಿನವಿಡೀ ಟ್ರೆಂಡ್‌ ಕೂಡ ಆಗಿತ್ತು.

ಈ ಸಂಗತಿಯು, ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ವಾದಕ್ಕೆ ಇಂಬು ನೀಡುವಂತಿತ್ತು. ಆದರೆ, ಸಿಂಧಿಯಾ ತಮ್ಮ ಟ್ವಿಟರ್‌ ಖಾತೆಯ ಪ್ರೊಫೈಲ್‌ನಲ್ಲಿ ಬಿಜೆಪಿಯನ್ನು ತೆಗೆದು ಹಾಕಿರುವುದು ಸುಳ್ಳು ಸುದ್ದಿ ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ.

ADVERTISEMENT

ಸಿಂಧಿಯಾ ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಬಿಜೆಪಿಯನ್ನು ಈ ವರೆಗೆ ಉಲ್ಲೇಖಿಸಿಯೇ ಇಲ್ಲ ಎಂದು ಗೊತ್ತಾಗಿವೆ.

ಇನ್ನು ಈ ಕುರಿತು ಇಂದು ಟ್ವೀಟ್‌ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ‘ದುಃಖದ ವಿಷಯವೆಂದರೆ, ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.