
ರಾಷ್ಟ್ರಪತಿ ದ್ರೌಪದಿ ಮುರ್ಮು
ಪಿಟಿಐ ಚಿತ್ರ
ನವದೆಹಲಿ: ದೇಶದ ಜನತೆಗೆ ಡಿಜಿಟಲ್ ಅರೆಸ್ಟ್ ಅತ್ಯಂತ ಭಯಾನಕ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೇಳಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಐಪಿಎಸ್ ಪ್ರೊಬೇಷನರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಅದನ್ನು ಉಳಿಸಲು ಮತ್ತು ವೇಗಗೊಳಿಸಲು ಹೆಚ್ಚಿನ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ಅಗತ್ಯವಿದೆ. ಯಾವುದೇ ರಾಜ್ಯ ಅಥವಾ ಪ್ರದೇಶದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಹೂಡಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಆರ್ಥಿಕ ಪ್ರೋತ್ಸಾಹದಷ್ಟೇ ಪೊಲೀಸ್ ವ್ಯವಸ್ಥೆಯೂ ಮುಖ್ಯವಾಗಿದೆ’ ಎಂದರು.
‘ಕೇವಲ 10 ವರ್ಷಗಳ ಹಿಂದೆ ‘ಡಿಜಿಟಲ್ ಅರೆಸ್ಟ್’ ಎನ್ನುವ ಪದವನ್ನೇ ಅರ್ಥೈಸಿಕೊಳ್ಳಲು ಕಷ್ಟವಾಗಿತ್ತು. ಆದರೆ ಇಂದು ಭಯಾನಕ ಬೆದರಿಕೆಯಾಗಿ ಬದಲಾಗಿದೆ. ಇದು ಪೊಲೀಸ್ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ. ದುರುದ್ದೇಶಕ್ಕೆ ತಂತ್ರಜ್ಞಾನವನ್ನು ಬಳಸುವವರಿಗಿಂತ ಎಐ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಿಡಿಗೇಡಿಗಳಿಗಿಂತ ಹಲವು ಹೆಜ್ಜೆ ಮುಂದಿರಬೇಕು’ ಎಂದು ತಿಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.