ADVERTISEMENT

ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ

ಪಿಟಿಐ
Published 13 ಅಕ್ಟೋಬರ್ 2025, 16:05 IST
Last Updated 13 ಅಕ್ಟೋಬರ್ 2025, 16:05 IST
....
....   

ನವದೆಹಲಿ: ಕೇಂದ್ರ ಸರ್ಕಾರವು ಪಿಂಚಣಿದಾರರಿಗಾಗಿ ನವೆಂಬರ್ 1ರಿಂದ 30ರವರೆಗೆ ದೇಶದಾದ್ಯಂತ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ (ಡಿಎಲ್‌ಸಿ) ಅಭಿಯಾನವನ್ನು ಆಯೋಜಿಸಿದೆ.

‘ಪಿಂಚಣಿ ವಿತರಿಸುವ 19 ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ 2,000 ಜಿಲ್ಲೆಗಳು ಮತ್ತು ಉಪ–ವಿಭಾಗ ಕಚೇರಿ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ’ ಎಂದು ಅಧಿಕೃತ ಪ್ರಕಟಣೆ ಸೋಮವಾರ ತಿಳಿಸಿದೆ.

ದೇಶದ ಮೂಲೆ ಮೂಲೆಗಳಲ್ಲಿರುವ ಪಿಂಚಣಿದಾರರನ್ನು ತಲುಪಿ ಡಿಜಿಟಲ್ ಜೀವಿತ ಪ್ರಮಾಣಪತ್ರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಪಿಂಚಣಿ ಇಲಾಖೆಯು ಆಯೋಜಿಸುತ್ತಿರುವ ನಾಲ್ಕನೇ ಅಭಿಯಾನ ಇದಾಗಿದೆ.

ADVERTISEMENT

1.8 ಲಕ್ಷ ಪೋಸ್ಟ್‌ಮ್ಯಾನ್‌ಗಳು ಮತ್ತು ಗ್ರಾಮೀಣ ಡಾಕ್‌ ಸೇವಕರು(ಜಿಡಿಎಸ್‌) ಎಲ್ಲ ವಿಧದ ಪಿಂಚಣೆದಾರರ ಮನೆ ಬಾಗಿಲಿಗೆ ತೆರಳಿ ಡಿಎಲ್‌ಸಿ ಸೇವೆಗಳ ಬಗ್ಗೆ ತಿಳಿಸಲಿದ್ದಾರೆ.

ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಮುಂದುವರಿಸಲು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ‘ಜೀವಿತ ಪ್ರಮಾಣಪತ್ರ’ವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.