ADVERTISEMENT

ಅಸ್ಸಾಂ: ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಡಿಎನ್‌ಎಲ್‌ಎ

ಪಿಟಿಐ
Published 27 ಏಪ್ರಿಲ್ 2023, 16:16 IST
Last Updated 27 ಏಪ್ರಿಲ್ 2023, 16:16 IST

ನವದೆಹಲಿ (ಪಿಟಿಐ): ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ (ಡಿಎನ್ಎಲ್‌ಎ) ಸಂಘಟನೆಯು ಗುರುವಾರ ಸರ್ಕಾರದ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾಶರ್ಮಾ ಅವರು ಈ ವೇಳೆ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಅಮಿತ್ ಶಾ, ‘ಅಸ್ಸಾಂನಲ್ಲಿ ಇನ್ನು ಯಾವುದೇ ಬುಡಕಟ್ಟು ಉಗ್ರಗಾಮಿ ಸಂಘಟನೆ ಸಕ್ರಿಯವಾಗಿಲ್ಲ. ಈ ಒಪ್ಪಂದದೊಂದಿಗೆ ಎಲ್ಲ ಬುಡಕಟ್ಟು ಉಗ್ರಗಾಮಿ ಸಂಘಟನೆಗಳು ಮುಖ್ಯವಾಹಿನಿಗೆ ಸೇರಿದಂತಾಗಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT