
ಸಾವು (ಪ್ರಾತಿನಿಧಿಕ ಚಿತ್ರ)
ಪಿಟಿಐ
ವಡೋದರಾ: ಕುಟುಂಬ ಸಮೇತ ಊಟಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ತೆರೆದ ಒಳಚರಂಡಿ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ.
ಮೃತರನ್ನು ನಿವೃತ್ತ ಎಎಸ್‌ಪಿಯೊಬ್ಬರ ಪುತ್ರ, 40 ವರ್ಷದ ವಿಪುಲ್‌ಸಿಂಹ ಜಾಲಾ ಎಂದು ಗುರುತಿಸಲಾಗಿದೆ. ಮಂಜುಳಾಪುರ ಕ್ರೀಡಾ ಸಂಕೀರ್ಣದ ಬಳಿ ಸ್ವಚ್ಛಗೊಳಿಸಲು ತೆರೆದು, ಮುಚ್ಚದೇ ಬಿಟ್ಟಿದ್ದ 15ರಿಂದ 30 ಅಡಿ ಆಳದ ಒಳಚರಂಡಿ ಗುಂಡಿಗೆ ವಿಪುಲ್ ಬಿದ್ದಿದ್ದರು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಕಾರು ನಿಲ್ಲಿಸಲು ಹೋದ ವಿಪುಲ್ 20 ನಿಮಿಷದ ನಂತರವೂ ಬರಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅಲ್ಲೇ ಇದ್ದ ತೆರೆದ ಗುಂಡಿಯಲ್ಲಿ ನೋಡಿದಾಗ ಬೂಟುಗಳು ತೇಲುತ್ತಿದ್ದವು’ ಎಂದು ಸಂಬಂಧಿ ಗಿರಿರಾಜ್ ಸಿಂಹ ಚುಡಾಸಮಾ ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ನೆರವಿನಿಂದ ವಿಪುಲ್ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವಡೋದರಾ ಪಾಲಿಕೆ ಆಯುಕ್ತ ಅರುಣ್ ಮಹೇಶ್ ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.