ADVERTISEMENT

ದೋಣಿಮಲೈ ಗಣಿ ಗುತ್ತಿಗೆ ವಿಸ್ತರಣೆಗೆ ಮಾತುಕತೆ: ಎನ್‌ಎಂಡಿಸಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:00 IST
Last Updated 27 ಡಿಸೆಂಬರ್ 2019, 20:00 IST

ನವದೆಹಲಿ: ಕರ್ನಾಟಕದ ಬಳ್ಳಾರಿ ಜಿಲ್ಲೆಯ ದೋಣಿಮಲೈ ಗಣಿಯ ಗುತ್ತಿಗೆ ವಿಸ್ತರಣೆ ಕುರಿತು ಉನ್ನತಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್‌ಎಂಡಿಸಿ) ಶುಕ್ರವಾರ ತಿಳಿಸಿದೆ.

’ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿರುವುದರಿಂದ 15 ದಿವಸ ಅಥವಾ ತಿಂಗಳೊಳಗೆ ಗಣಿಯ ಕಾರ್ಯಾಚರಣೆ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ. ಗುತ್ತಿಗೆ ವಿಸ್ತರಣೆಯನ್ನು ರಾಜ್ಯ ಸರ್ಕಾರ ತಡೆ ಹಿಡಿಯುವುದರಲ್ಲಿ ಯಾವುದೇ ಅರ್ಥ ಇಲ್ಲ’ ಎಂದು ಎನ್‌ಎಂಡಿಸಿ ನಿರ್ದೇಶಕ (ಉತ್ಪಾದನೆ ವಿಭಾಗ) ಪಿ.ಕೆ. ಸತ್ಪತಿ ತಿಳಿಸಿದ್ದಾರೆ.ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಹಮ್ಮಿಕೊಂಡಿದ್ದ ಗಣಿಗಾರಿಕೆ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT