ADVERTISEMENT

ಉತ್ತರಾಖಂಡ: ಜೋಶಿಮಠದ ಸಂತ್ರಸ್ತರಿಗೆ ಪರಿಹಾರ ವಿತರಣೆ ಆರಂಭ

ಪಿಟಿಐ
Published 4 ಮಾರ್ಚ್ 2023, 12:44 IST
Last Updated 4 ಮಾರ್ಚ್ 2023, 12:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡೆಹ್ರಾಡೂನ್‌: ರಾಜ್ಯದ ಪುನರ್ವಸತಿ ಯೋಜನೆಯಡಿ ಜೋಶಿಮಠದ ಭೂಕುಸಿತ ಸಂತ್ರಸ್ತರಿಗೆ ಪರಿಹಾರ ವಿತರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನಿರ್ದೇಶನದ ಮೇರೆಗೆ ಶುಕ್ರವಾರ ಪ್ರಕ್ರಿಯೆ ಆರಂಭಗೊಂಡಿದ್ದು, ಜೋಶಿಮಠದ ಮೂವರು ನಿವಾಸಿಗಳಿಗೆ ಮೊದಲ ದಿನವೇ ₹63.20 ಲಕ್ಷ ಪರಿಹಾರ ನೀಡಲಾಗಿದೆ.

ಜೋಶಿಮಠದ ಸುನೀಲ್ ವಾರ್ಡ್‌ನ ನಿವಾಸಿಗಳಾದ ನಿವೃತ್ತ ಮೇಜರ್ ಸುಬೇದಾರ್ ಮಂಗ್ಲು ಲಾಲ್, ಕೃಷ್ಣ ಪನ್ವಾರ್ ಮತ್ತು ಬಲದೇವ್ ಸಿಂಗ್ ಪನ್ವಾರ್ ಪರಿಹಾರ ಪಡೆದ ಫಲಾನುಭವಿಗಳಾಗಿದ್ದಾರೆ.

ADVERTISEMENT

ಸ್ಥಳೀಯ ಆಡಳಿತಾಧಿಕಾರಿಗಳು ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿದ ನಂತರ ಪಟ್ಟಣದಲ್ಲಿರುವ ಇತರ ಸಂತ್ರಸ್ತರಿಗೆ ಪರಿಹಾರವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಭೂಕುಸಿತದಿಂದಾಗಿ ಜೋಶಿಮಠ ಪಟ್ಟಣದ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.