ADVERTISEMENT

ಥ್ಯಾಂಕ್ಸ್‌ ಹೇಳಲು ದೆಹಲಿಗೆ ಬಂದಿದ್ದ ತಮಿಳುನಾಡಿನ ಡಿಸಿಎಂ ಪನ್ನೀರ್‌ ಸೆಲ್ವಂ

ಏಜೆನ್ಸೀಸ್
Published 26 ಜುಲೈ 2018, 5:10 IST
Last Updated 26 ಜುಲೈ 2018, 5:10 IST
ಪನ್ನೀರ್‌ ಸೆಲ್ವಂ
ಪನ್ನೀರ್‌ ಸೆಲ್ವಂ   

ನವದೆಹಲಿ: ಅನಾರೋಗ್ಯ ಪೀಡಿತರಾಗಿದ್ದ ಸಹೋದರನನ್ನು ಮದುರೆಯಿಂದ ಚೆನ್ನೈಗೆ ಸ್ಥಳಾಂತರಿಸಲು ಸೇನಾ ಹೆಲಿಕಾಪ್ಟರ್‌ಸೌಲಭ್ಯ ಕಲ್ಪಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಥ್ಯಾಂಕ್ಸ್‌ ಹೇಳಲು ತಮಿಳುನಾಡಿನ ಉಪಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ನವದೆಹಲಿಗೆ ಬುಧವಾರ ಬಂದಿದ್ದರು. ಹಾಗೆಂದುಅವರೇ ಹೇಳಿಕೊಂಡಿದ್ದಾರೆ.

ಮಾಡಿದ ಸಹಾಯವನ್ನು ಸೆಲ್ವಂ ಸಾರ್ವಜನಿಕಗೊಳಿಸಿರುವುದಕ್ಕೆ ಸಚಿವೆ ಅಸಮಾಧಾನಗೊಂಡಿದ್ದಾರಂತೆ. ಹಾಗಾಗಿ ಸೆಲ್ವಂಭೇಟಿಯಾಗಲು ನಿರಾಕರಿಸಿದ್ದಾರೆ. ಅರ್ಧ ಗಂಟೆ ಕಾದರೂ ಸೀತಾರಾಮನ್‌ರ ಭೇಟಿ ಸಾಧ್ಯವಾಗದೆ ಸೆಲ್ವಂ ಥ್ಯಾಂಕ್ಸ್‌ ಹೇಳಲುಸಾಧ್ಯವಾಗದೆಮರಳಿ ಬಂದಿದ್ದಾರೆ.

ರಾಜೀನಾಮೆಗೆ ಒತ್ತಾಯ:

ADVERTISEMENT

ಈಗ ಇದೇ ವಿಷಯವನ್ನು ಮುಂದಿಟ್ಟುಕೊಂಡು ಡಿಎಂಕೆ ಪಕ್ಷ ಪನ್ನೀರ್‌ ಸೇಲ್ವಂ ಮತ್ತು ನಿರ್ಮಲಾ ಸೀತಾರಾಮನ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದೆ.

‘ಖಾಸಗಿ ವ್ಯಕ್ತಿಯೊಬ್ಬರಿಗಾಗಿ ಸೇನೆಯ ಹೆಲಿಕಾಪ್ಟರ್‌ ಅನ್ನು ಒದಗಿಸಿದ್ದು ಯಾಕೆ’ ಎಂದು ಡಿಎಂಕೆ ನಾಯಕ ಸ್ಟ್ಯಾಲಿನ್‌ ಪ್ರಶ್ನಿಸಿದ್ದಾರೆ.

‘ಸೇನೆಯ ಏರ್‌ ಆ್ಯಂಬುಲೆನ್ಸ್‌ ಸೌಲಭ್ಯ ನೀಡಿದ ಸೀತಾರಾಮನ್‌ ಮತ್ತು ಅದನ್ನು ಬಳಿಸಿದ ಪನ್ನೀರ್‌ ಸೆಲ್ವಂ ಇಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಸ್ಟ್ಯಾಲಿನ್ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ಇತ್ತೀಚೆಗೆ ಮಂಡನೆಯಾದ ಅವಿಶ್ವಾಸ ಮಂಡನೆ ಗೊತ್ತುವಳಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೆಲ್ವಂ ಪ್ರತಿನಿಧಿಸುವ ಎಐಎಡಿಎಂಕೆ ಬೆಂಬಲಿಸಿತ್ತು. ಆ ಬಳಿಕ ಈ ಸೇನಾ ಕಾಪ್ಟರ್ ಬಳಿಸಿದ ವಿವಾದ ಹೊರಬಿದ್ದಿದೆ. ನರೇಂದ್ರ ಮೋದಿ ಅವರೊಂದಿಗೆಪನ್ನೀರ್‌ ಸೆಲ್ವಂ ಉತ್ತಮ ಸ್ನೇಹಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.