ADVERTISEMENT

ಆಂಧ್ರಪ್ರದೇಶ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಪಿಎಚ್‌ಡಿ, ಎಂಟೆಕ್‌ ಪಡೆದವರು ಅರ್ಜಿ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 11:36 IST
Last Updated 21 ಜನವರಿ 2023, 11:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮರಾವತಿ(ಪಿಟಿಐ): ಆಂಧ್ರಪ್ರದೇಶದಲ್ಲಿ 6,400 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪಿಎಚ್‌.ಡಿ ಪಡೆದ 10, ಎಂ.ಟೆಕ್‌ನ 930, ಎಂಬಿಎನ 5,284, ಎಂಎಸ್ಸಿಯ 4,365 ಹಾಗೂ ಎಲ್‌ಎಲ್‌ಬಿ ಪದವಿ ಪಡೆದ 94 ಮಂದಿ ಸೇರಿದಂತೆ ಒಟ್ಟು 5,03,486 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಕಾನ್‌ಸ್ಟೆಬಲ್‌ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಇಂಟರ್‌ಮೀಡಿಯೇಟ್‌. ಆದರೆ, ಅರ್ಜಿ ಸಲ್ಲಿಸಿದವರಲ್ಲಿ ಒಟ್ಟು 13,961 ಸ್ನಾತಕೋತ್ತರ ಪದವೀಧರರು ಹಾಗೂ 1,55,537 ಪದವೀಧರರು ಇದ್ದಾರೆ. ಈ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್‌ ನೇಮಕಾತಿ ಮಂಡಳಿ ತಿಳಿಸಿದೆ.

ಒಟ್ಟು 5,03,486 ಅಭ್ಯರ್ಥಿಗಳ ಪೈಕಿ 3,95,415 ಪುರುಷರು ಮತ್ತು 1,08,071 ಮಹಿಳೆಯರಾಗಿದ್ದಾರೆ..

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.