ADVERTISEMENT

ಬಾಲಕಿಯರ ನಾಪತ್ತೆ ಪ್ರಕರಣ: ‘ಘಟನೆಗೆ ಚಲನಚಿತ್ರ ಪ್ರೇರಣೆ ಎಂದು ಭಾವಿಸಬೇಡಿ’

ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಪಿಟಿಐ
Published 15 ಜುಲೈ 2018, 16:30 IST
Last Updated 15 ಜುಲೈ 2018, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ : ‘ಬಾಲಕಿಯರು ನಾಪತ್ತೆಯಾದ ಸಂದರ್ಭಗಳಲ್ಲಿ ಚಲನಚಿತ್ರಗಳಲ್ಲಿ ತೋರಿಸುವಂತೆ ಅವರು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾರೆ ಎಂಬುದಾಗಿ ಭಾವಿಸಬೇಡಿ’ ಎಂದು ಬಾಂಬೈ ಹೈಕೋರ್ಟ್‌ ಪೊಲೀಸ್‌ ಅಧಿಕಾರಿಗಳಿಗೆ ಚಾಟಿ ಬೀಸಿದೆ.

ಠಾಣೆ ಜಿಲ್ಲೆಯಲ್ಲಿ ಕಳೆದ ವರ್ಷ ನಾಪತ್ತೆಯಾಗಿರುವ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ಈ ರೀತಿ ಹೇಳಿದ್ದು, ‘ಪೊಲೀಸ್‌ ವ್ಯವಸ್ಥೆ ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಬಾಲಕಿ ನಾಪತ್ತೆಯಾಗಿರುವುದು ನಿಜ ಜೀವನದ ಒಂದು ಘಟನೆ. ಬಾಲಕಿ ಕಾಣೆಯಾದ ನಂತರ ಆಕೆ ಕುಟುಂಬ ಸಂಕಟ ಅನುಭವಿಸುತ್ತಿರುತ್ತದೆ. ನಾಪತ್ತೆಯಾದ ಮಕ್ಕಳೂ ಸಂಕಟ ಅನುಭವಿಸುತ್ತಿರುತ್ತಾರೆ ಎಂಬುದನ್ನು ಪೊಲೀಸ್‌ ಅಧಿಕಾರಿಗಳು ಮರೆಯಬಾರದು’ ಎಂದು ನ್ಯಾಯಮೂರ್ತಿಗಳಾದ ಎಸ್‌.ಸಿ.ಧರಮಾಧಿಕಾರಿ ಹಾಗೂ ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ಪೀಠ ಹೇಳಿದೆ.

ADVERTISEMENT

ಒಂದು ವರ್ಷ ಕಳೆದರೂ ಮಗಳನ್ನು ಹುಡುಕಿ ಕೊಡುವಲ್ಲಿ ಪೊಲೀಸರು ವಿಫಲರಾಗಿದ್ದು, ಶೋಧಕಾರ್ಯವನ್ನು ಚುರುಕುಗೊಳಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ಕೋರಿ ಬಾಲಕಿಯ ತಂದೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.