ADVERTISEMENT

ಪ್ರತಿಭಾವಂತ ಯುವಕರಿಗೆ ಹಲವು ಕ್ಷೇತ್ರಗಳಲ್ಲಿ ವಿಪುಲ ಅವಕಾಶ: ಪ್ರಧಾನಿ ಮೋದಿ

ಪಿಟಿಐ
Published 3 ಮಾರ್ಚ್ 2021, 8:01 IST
Last Updated 3 ಮಾರ್ಚ್ 2021, 8:01 IST
ಶಿಕ್ಷಣ ಕ್ಷೇತ್ರದಲ್ಲಿ ಬಜೆಟ್ ಅನುಷ್ಠಾನ ಕುರಿತು ಬುಧವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಬಜೆಟ್ ಅನುಷ್ಠಾನ ಕುರಿತು ಬುಧವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು.   

ನವದೆಹಲಿ(ಪಿಟಿಐ): ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ನಂತರ, ಶಿಕ್ಷಣ, ಕೌಶಲ, ಸಂಶೋಧನೆ ಮತ್ತು ಹೊಸ ಪರಿಕಲ್ಪನೆಗೆ ಆದ್ಯತೆ ನೀಡಿದ್ದು, ಇದರಿಂದ ಬಾಹ್ಯಾಕಾಶ, ಪರಮಾಣು ಇಂಧನ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭಾವಂತ ಯುವಕರಿಗೆ ಸಾಕಷ್ಟು ಅವಕಾಶಕಗಳು ಲಭ್ಯವಾಗಲಿವೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಬಜೆಟ್ ನಿಬಂಧನೆಗಳ ಅನುಷ್ಠಾನ ಕುರಿತು ವೆಬ್‌ನಾರ್‌ ಉದ್ದೇಶಿಸಿ ಮಾತನಾಡಿದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಸ್ಥಳೀಯ ಭಾಷೆಯ ಬಳಕೆಯನ್ನು ಉತ್ತೇಜಿಸುತ್ತಿದೆ. ಇದನ್ನು ಬಳಸಿಕೊಂಡು ಅತ್ಯುತ್ತಮ ವಿಷಯವನ್ನು(ಕಟೆಂಟ್‌) ಸಿದ್ಧಪಡಿಸುವುದು ಎಲ್ಲಾ ಭಾರತೀಯ ಭಾಷಾ ತಜ್ಞರ ಜವಾಬ್ದಾರಿಯಾಗಿದೆ. ತಂತ್ರಜ್ಞಾನದ ಈ ಯುಗದಲ್ಲಿ ಇದನ್ನು ಖಂಡಿತವಾಗಿ ಸಾಧ್ಯವಾಗಿಸಬಹುದು‘ ಎಂದು ಅಭಿಪ್ರಾಯಪಟ್ಟರು. ‌

‘ಶಿಕ್ಷಣದೊಂದಿಗೆ ಉದ್ಯಮ ಮತ್ತು ಉದ್ಯಮಶೀಲತಾ ಸಾಮರ್ಥ್ಯವನ್ನು ಜೋಡಿಸುವ ನಮ್ಮ ಪ್ರಯತ್ನವನ್ನು ಕೇಂದ್ರ ಬಜೆಟ್‌ ಮತ್ತಷ್ಟು ವಿಸ್ತರಿಸಿದೆ. ಈ ಪ್ರಯತ್ನದ ಫಲವಾಗಿ ಇಂದು ವೈಜ್ಞಾನಿಕ ಪ್ರಕಟಣೆಗಳಲ್ಲಿ ಭಾರತ ವಿಶ್ವದ ಮೂರನೇ ಅಗ್ರ ರಾಷ್ಟ್ರವಾಗಿದೆ‘ ಎಂದು ಪ್ರತಿಪಾದಿಸಿದರು.

ADVERTISEMENT

‘ಸ್ವಾವಲಂಬಿ ಭಾರತ ನಿರ್ಮಿಸಲು ದೇಶದ ಯುವಜನರಲ್ಲಿ ವಿಶ್ವಾಸ ಮೂಡಬೇಕು. ಯುವಜನರು ತಮ್ಮ ಶಿಕ್ಷಣ ಮತ್ತು ಜ್ಞಾನದ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದರೆ ಮಾತ್ರ ಆ ವಿಶ್ವಾಸ ಮೂಡುತ್ತದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.