ADVERTISEMENT

ಡಾರ್ನಿಯರ್‌ 228: ಕಣ್ಗಾವಲು ಕಾರ್ಯಾಚರಣೆ; ಇತಿಹಾಸ ಬರೆದ ನೌಕಾಪಡೆಯ ವನಿತೆಯರು

ಅರೆಬಿಯನ್‌ ಸಮುದ್ರದ ಉತ್ತರ ಭಾಗದಲ್ಲಿ ಸ್ವತಂತ್ರ ಕಣ್ಗಾವಲು ಕಾರ್ಯಾಚರಣೆ

ಪಿಟಿಐ
Published 4 ಆಗಸ್ಟ್ 2022, 14:15 IST
Last Updated 4 ಆಗಸ್ಟ್ 2022, 14:15 IST
ಅರೆಬಿಯನ್‌ ಸಮುದ್ರದ ಉತ್ತರ ಭಾಗದಲ್ಲಿ ಸ್ಥಳಾನ್ವೇಷಣೆ ಹಾಗೂ ಕಣ್ಗಾವಲು ಕಾರ್ಯಾಚರಣೆ ನಡೆಸಿದ ಐವರು ಮಹಿಳಾ ಅಧಿಕಾರಿಗಳು –‍ಪಿಟಿಐ ಚಿತ್ರ 
ಅರೆಬಿಯನ್‌ ಸಮುದ್ರದ ಉತ್ತರ ಭಾಗದಲ್ಲಿ ಸ್ಥಳಾನ್ವೇಷಣೆ ಹಾಗೂ ಕಣ್ಗಾವಲು ಕಾರ್ಯಾಚರಣೆ ನಡೆಸಿದ ಐವರು ಮಹಿಳಾ ಅಧಿಕಾರಿಗಳು –‍ಪಿಟಿಐ ಚಿತ್ರ    

ನವದೆಹಲಿ: ಭಾರತೀಯ ನೌಕಾಪಡೆಯ ಐವರು ಮಹಿಳಾ ಅಧಿಕಾರಿಗಳ ತಂಡವು ‘ಡಾರ್ನಿಯರ್‌ 228’ ವಿಮಾನದ ಮೂಲಕ ಅರೆಬಿಯನ್‌ ಸಮುದ್ರದ ಉತ್ತರ ಭಾಗದಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಸ್ಥಳಾನ್ವೇಷಣೆ ಹಾಗೂ ಕಣ್ಗಾವಲು ಕಾರ್ಯಾಚರಣೆ ನಡೆಸಿ ದಾಖಲೆ ಬರೆದಿದೆ.

ಮಿಷನ್‌ ಕಮಾಂಡರ್‌, ಲೆಫ್ಟಿನೆಂಟ್‌ ಅಂಚಲ್‌ ಶರ್ಮಾ ನೇತೃತ್ವದ ತಂಡವು ಬುಧವಾರ ಈ ಸಾಧನೆ ಮಾಡಿದೆ.

ಲೆಫ್ಟಿನೆಂಟ್‌ ಶಿವಾಂಗಿ, ಲೆಫ್ಟಿನೆಂಟ್‌ ಅಪೂರ್ವ ಗಿತೆ (ಇಬ್ಬರೂ ಪೈಲಟ್‌), ಸೆನ್ಸಾರ್‌ ಅಧಿಕಾರಿ ಲೆಫ್ಟಿನೆಂಟ್‌ ಪೂಜಾ ಪಾಂಡಾ ಮತ್ತು ಸಬ್‌ ಲೆಫ್ಟಿನೆಂಟ್‌ ಪೂಜಾ ಶೇಖಾವತ್ ಅವರು ಈ ತಂಡದಲ್ಲಿದ್ದರು.

ADVERTISEMENT

‘ಪೋರಬಂದರಿನಲ್ಲಿರುವ ‘ಐಎನ್ಎಎಸ್‌ 314’ ನೌಕಾ ವಾಯುದಳದ ವನಿತೆಯರತಂಡದಿಂದ ಚಾರಿತ್ರಿಕ ಸಾಧನೆ ಮೂಡಿಬಂದಿದೆ’ ಎಂದು ನೌಕಾಪಡೆ ಗುರುವಾರ ಸಂತಸ ವ್ಯಕ್ತಪಡಿಸಿದೆ.

‘ಮಹಿಳಾ ತಂಡದವರಿಗೆ ಒಂದು ತಿಂಗಳು ತರಬೇತಿ ನೀಡಲಾಗಿತ್ತು. ಜೊತೆಗೆ ಕಾರ್ಯಾಚರಣೆಯ ವೇಳೆ ಅನುಸರಿಸಬೇಕಿರುವ ಕ್ರಮ‌ಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಾಗಿತ್ತು’ ಎಂದು ಭಾರತೀಯ ನೌಕಾಪಡೆಯ ವಕ್ತಾರರಾಗಿರುವ ಕಮಾಂಡರ್ ವಿವೇಕ್‌ ಮಾಧವಳ್‌ ತಿಳಿಸಿದ್ದಾರೆ.

‘ಈ ಕಾರ್ಯಾಚರಣೆಯು ಸ್ತ್ರಿ ಶಕ್ತಿಯನ್ನು ಅನಾವರಣಗೊಳಿಸಿದೆ. ಮಹಿಳಾ ಅಧಿಕಾರಿಗಳೂ ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂಬುದನ್ನೂ ಸಾಬೀತು‍ಪಡಿಸಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.