ADVERTISEMENT

ಕೆನಡಾ ಮಾರುಕಟ್ಟೆಗೆ ಡಾ. ರೆಡ್ಡೀಸ್‌ ಕಂಪನಿಯ ಕ್ಯಾನ್ಸರ್‌ ಔಷಧ ಬಿಡುಗಡೆ

ಪಿಟಿಐ
Published 2 ಸೆಪ್ಟೆಂಬರ್ 2021, 5:22 IST
Last Updated 2 ಸೆಪ್ಟೆಂಬರ್ 2021, 5:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್‌: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ‘ರೆಡ್ಡಿ–ಲೆನಾಲಿಡೊಮೈಡ್‌’ ಔಷಧವನ್ನು ಕೆನಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೈದರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಗುರುವಾರ ಹೇಳಿದೆ.

ಈಗಾಗಲೇ ಬಳಕೆಯಲ್ಲಿರುವ ಔಷಧ ‘ರೆವ್‌ಲಿಮಿಡ್‌’ಗೆ ಸಮಾನವಾದ ‘ರೆಡ್ಡಿ–ಲೆನಾಲಿಡೊಮೈಡ್‌’ಗೆ ಅಲ್ಲಿನ ಆರೋಗ್ಯ ಇಲಾಖೆ ‘ಹೆಲ್ತ್ ಕೆನಡಾ’ ಅನುಮೋದನೆ ನೀಡಿದ ಬೆನ್ನಲ್ಲೇ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಇದು ಕೆನಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿರುವ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಮೊದಲ ಜೆನೆರಿಕ್‌ ಔಷಧ ಎಂದು ಕಂಪನಿಯ ಕೆನಡಾ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿನೋದ್ ರಾಮಚಂದ್ರನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.