ADVERTISEMENT

ಡಿಎನ್‌ಇಪಿ ಸ್ವೀಕಾರಾರ್ಹವಲ್ಲ: ಯೆಚೂರಿ

ಪಿಟಿಐ
Published 20 ಜುಲೈ 2019, 19:25 IST
Last Updated 20 ಜುಲೈ 2019, 19:25 IST
   

ನವದೆಹಲಿ:ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು (ಡಿಎನ್‌ಇಪಿ) ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣವನ್ನು ಖಚಿತಪಡಿಸುವಂತಿದೆ. ಹೀಗಾಗಿ ಅದು ‘ಸ್ವೀಕಾರಾರ್ಹವಲ್ಲ’ ಎಂದುಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಶುಕ್ರವಾರ ಬರೆದ ಪತ್ರದಲ್ಲಿ ಅವರು, ಕರಡು ನೀತಿ ಕುರಿತು ಎಡಪಕ್ಷದ ಅವಲೋಕನಗಳನ್ನು ಹಂಚಿಕೊಂಡಿದ್ದಾರೆ.

ಈ ನೀತಿಯು ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮಾಣ, ಗುಣಮಟ್ಟ ಮತ್ತು ನೀತಿ ನಡುವಿನ ಸಮತೋಲನವನ್ನು ಸಾಧಿಸುವ ಬದಲಿಗೆಕಾರ್ಪೊರೇಟ್ ಪರವಾದ ನಿಲುವನ್ನು ಕರಡು ನೀತಿ ಉತ್ತೇಜಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.