ADVERTISEMENT

ಕುರುಲ್ಕರ್‌ ಹನಿಟ್ರಾಪ್‌ ಪ್ರಕರಣ: ಪಾಕಿಸ್ತಾನ ಮಹಿಳೆ ಸಹಆರೋಪಿ

ಪಿಟಿಐ
Published 21 ಜೂನ್ 2023, 15:55 IST
Last Updated 21 ಜೂನ್ 2023, 15:55 IST
ಮೊಬೈಲ್‌ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?
ಮೊಬೈಲ್‌ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?   

ಪುಣೆ (ಪಿಟಿಐ): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿ ಪ್ರದೀಪ್‌ ಕುರುಲ್ಕರ್‌ ಅವರನ್ನು ಹನಿಟ್ರಾಪ್‌ನಲ್ಲಿ ಸಿಲುಕಿಸಿದ್ದ ಪ್ರಕರಣದಲ್ಲಿ ಪಾಕಿಸ್ತಾನಿ ಮಹಿಳಾ ಏಜೆಂಟ್‌ ಅನ್ನು ಪ್ರಕರಣದ ಸಹಆರೋಪಿಯನ್ನಾಗಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ ನ್ಯಾಯಾಲಯವೊಂದಕ್ಕೆ ತಿಳಿಸಿದೆ. 

ಕುರುಲ್ಕರ್‌ ಅವರು ಪುಣೆಯಲ್ಲಿಯ ಡಿಆರ್‌ಡಿಒ ಪ್ರಯೋಗಾಲಯವೊಂದರ ನಿರ್ದೇಶಕರಾಗಿದ್ದರು. ಪಾಕಿಸ್ತಾನದ ಗುಪ್ತಚರ ಇಲಾಖೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯೊಬ್ಬರಿಗೆ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಆರೋಪದ ಮೇಲೆ ಅವರನ್ನು ಭಯೋತ್ಪಾದನೆ ನಿಗ್ರಹ ದಳ ಮೇ 3ರಂದು ಬಂಧಿಸಿತ್ತು. 

ಝಾರಾ ದಾಸ್‌ಗುಪ್ತ ಎಂದು ಹೆಸರು ಹೇಳಿಕೊಂಡಿದ್ದ ಮಹಿಳೆ ಕುರುಲ್ಕರ್‌ ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.