ADVERTISEMENT

ದೇಶೀಯ ಕ್ಷಿಪಣಿ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 18:55 IST
Last Updated 21 ಜುಲೈ 2021, 18:55 IST
ದೇಶೀಯ ಕ್ಷಿಪಣಿ ಪರೀಕ್ಷೆ ಯಶಸ್ವಿ
ದೇಶೀಯ ಕ್ಷಿಪಣಿ ಪರೀಕ್ಷೆ ಯಶಸ್ವಿ   

ನವದೆಹಲಿ: ಸೈನಿಕರು ಹೊತ್ತು ಸಾಗಿಸಬಹುದಾದ ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ ಮತ್ತು ಕ್ಷಿಪಣಿಲಾಂಚರ್‌ನ ಅಂತಿಮ ಹಂತದ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಬುಧವಾರ ನಡೆಸಿದೆ.

ಹಗುರ ತೂಕದ ಈ ಕ್ಷಿಪಣಿ ವ್ಯವಸ್ಥೆಯನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಗುರಿ ನಿರ್ದೇಶಿತವಾದ ಈ ಕ್ಷಿಪಣಿಯನ್ನು ಯುದ್ಧ ಟ್ಯಾಂಕ್‌ಗಳ ಮೇಲೆ ದಾಳಿ ನಡೆಸಲು ಬಳಸಬಹುದಾಗಿದೆ. ಕ್ಷಿಪಣಿಯ ಕನಿಷ್ಠ ಅಂತರದ ದಾಳಿಯ ಸಾಮರ್ಥ್ಯವನ್ನು ಬುಧವಾರ ಪರೀಕ್ಷಿಸಲಾಯಿತು. ಕ್ಷಿಪಣಿಯು ಯಶಸ್ವಿಯಾಗಿ ತನ್ನ ಗುರಿಯನ್ನು ತಲುಪಿತು. ಗುರಿಯನ್ನು ಧ್ವಂಸ ಮಾಡಿತು ಎಂದು ಡಿಆರ್‌ಡಿಒ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT