ADVERTISEMENT

ಜನವರಿ 1 ರಿಂದ ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2023, 10:38 IST
Last Updated 12 ಅಕ್ಟೋಬರ್ 2023, 10:38 IST
ಪುರಿ ಜಗನ್ನಾಥ ದೇಗುಲ –ಪಿಟಿಐ
ಪುರಿ ಜಗನ್ನಾಥ ದೇಗುಲ –ಪಿಟಿಐ   

ಭುವನೇಶ್ವರ: ಪುರಿ ಜಗನ್ನಾಥ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಸ್ತ್ರಸಂಹಿತೆ ರೂಪಿಸಲಾಗಿದ್ದು, ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಕ್ತಾದಿಗಳು ದೇವಸ್ಥಾನಕ್ಕೆ ಬರುವಾಗ ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪನ್ನೇ ಧರಿಸಬೇಕು. ಸ್ಕರ್ಟ್‌, ಜೀನ್ಸ್‌ ಪ್ಯಾಂಟ್‌, ಶಾರ್ಟ್ಸ್‌ನಂತಹ ಉಡುಪು ಧರಿಸುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ದೇವಾಲಯದಲ್ಲಿ ಕೆಲಸ ಮಾಡುವವರು ಮತ್ತು ಪೊಲೀಸರು ಭಕ್ತಾದಿಗಳ ಉಡುಗೆಯ ಬಗ್ಗೆ ನಿಗಾವಹಿಸಲಿದ್ದಾರೆ. ಸಭ್ಯ ಉಡುಗೆ ಧರಿಸಿದವರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರತಿದಿನ ಲಕ್ಷಕ್ಕೂ ಹೆಚ್ಚು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಸ್ತ್ರಸಂಹಿತೆ ಜಾರಿ ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

ದೇವಾಲಯದ ಎಲ್ಲಾ ಗೇಟ್‌ಗಳ ತೆರವಿಗೆ ಒತ್ತಾಯಿಸಿ ಅ.16ಕ್ಕೆ ಕಾಂಗ್ರೆಸ್‌ ರ‍್ಯಾಲಿ

ಭಕ್ತಾದಿಗಳ ಅನುಕೂಲಕ್ಕೆ ಜಗನ್ನಾಥ ದೇವಾಲಯದ ಎಲ್ಲಾ 4 ಗೇಟ್‌ಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ಒಡಿಶಾ ಪ್ರದೇಶ ಕಾಂಗ್ರೆಸ್‌ ಸಮಿತಿ ಇದೇ16 ರಂದು ರ‍್ಯಾಲಿ ನಡೆಸಲು ನಿರ್ಧರಿಸಿದೆ. 

ಮುಂಬರುವುದು ಕಾರ್ತಿಕ ಮಾಸ. ಈ ವೇಳೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಲಿದೆ. ಹೀಗಾಗಿ ಎಲ್ಲಾ ಗೇಟ್‌ಗಳನ್ನು ತಕ್ಷಣವೇ ತೆರೆಯುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.