ADVERTISEMENT

ಡ್ರೋನ್‌ಗಳಿಂದ ಹೆಚ್ಚಿನ ಅಪಾಯ: ಸೇನಾ ಉಪ ಮುಖ್ಯಸ್ಥ

ಪಿಟಿಐ
Published 10 ಅಕ್ಟೋಬರ್ 2020, 11:18 IST
Last Updated 10 ಅಕ್ಟೋಬರ್ 2020, 11:18 IST
ಡ್ರೋನ್
ಡ್ರೋನ್   

ನವದೆಹಲಿ:ಡ್ರೋನ್‌ಗಳು ಅಥವಾ ಮಾನವರಹಿತ ವೈಮಾನಿಕ ವಾಹನಗಳಿಂದ (ಯುಎವಿ) ಹೆಚ್ಚಿನ ಬೆದರಿಕೆಯಿದೆ ಎಂದುಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ ಸೈನಿ ಶನಿವಾರ ತಿಳಿಸಿದ್ದಾರೆ.

ಯುದ್ಧ ಅಧ್ಯಯನ ಕೇಂದ್ರ (ಸಿಇಎನ್‌ಜೆಒಡಬ್ಲ್ಯುಎಸ್‌) ವತಿಯಿಂದ ‘ಫೋರ್ಸ್ ಪ್ರೊಟೆಕ್ಷನ್ ಇಂಡಿಯಾ 2020’ ವಿಷಯದಡಿ ವೆಬಿನಾರ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಡಿಮೆ ವೆಚ್ಚದ ಮತ್ತು ಬಹು ಉಪಯೋಗಿ ಡ್ರೋನ್ ಭವಿಷ್ಯದಲ್ಲಿ ಹೆಚ್ಚು ಅ‍ಪಾಯಕಾರಿಯಾಗಬಹುದು’ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಡ್ರೋನ್‌ನಿಂದಾಗಿ ಅಪಾಯಗಳ ಬಗ್ಗೆ ಸೇನೆ ಸಿದ್ಧತೆ ಮಾಡಿಕೊಳ್ಳಬೇಕು. ಈ ಹೊಸ ತಂತ್ರಜ್ಞಾನದಿಂದ ಅಪಾಯವನ್ನು ಎದುರಿಸಬೇಕಾದ ಕೌಶಲಗಳನ್ನು ವೃದ್ಧಿಸಿಕೊಳ್ಳುವುದು ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

‌–50 ಡಿಗ್ರಿ ಸೆಲ್ಸಿಯಸ್‌ ತಾಪಮಾನವುಳ್ಳ ಪ್ರದೇಶಗಳಲ್ಲೂ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ, ಚಳಿಗಾಲದ ಬಟ್ಟೆಗಳು ಮತ್ತು ಇತರ ಉಪಕರಣಗಳನ್ನು ಭಾರತ ಇನ್ನೂ ಆಮದು ಮಾಡಿಕೊಳುತ್ತಿದೆ. ದೇಶದಲ್ಲಿಯೇ ಇವುಗಳ ಉತ್ಪಾದನೆಯಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.