ADVERTISEMENT

ಡ್ರಗ್ಸ್‌ ಪ್ರಕರಣ: ದೀಪಿಕಾಗೆ ಸಮನ್ಸ್‌ ಸಾಧ್ಯತೆ

ಪಿಟಿಐ
Published 22 ಸೆಪ್ಟೆಂಬರ್ 2020, 13:14 IST
Last Updated 22 ಸೆಪ್ಟೆಂಬರ್ 2020, 13:14 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಮುಂಬೈ:ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಗತ್ಯ ಎನಿಸಿದರೆ ನಟಿ ದೀಪಿಕಾ ಪಡುಕೋಣೆ ಅವರಿಗೆ ಸಮನ್ಸ್‌ ನೀಡಲಾಗುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ದೀಪಿಕಾ ಹಾಗೂ ಅವರ ಮ್ಯಾನೇಜರ್‌ ಕರೀಷ್ಮಾ ನಡುವಿನ ವಾಟ್ಸ್‌ಆ್ಯಪ್‌‌ ಸಂಭಾಷಣೆಗೆ ಸಂಬಂಧಿಸಿ ಸಮನ್ಸ್ ನೀಡಲು ನಿರ್ಧರಿಸಲಾಗಿದೆ ಎನ್‌ಸಿಬಿ ಮೂಲಗಳು ತಿಳಿಸಿವೆ.

ಕರೀಷ್ಮಾ ಪ್ರಕಾಶ್‌ ಮತ್ತು ಕ್ವಾನ್‌ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್ ಸಿಇಒ‌ ಧುರ್ವ್‌ ಚಿಟ್‌ಗೋಪೇಕರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸಮನ್ಸ್‌ ನೀಡಲಾಗಿದೆ.

ADVERTISEMENT

ನಟಿಯರಾದ ರಾಕುಲ್‌ ಪ್ರೀತ್‌ ಸಿಂಗ್‌, ಸಾರಾ ಅಲಿ ಖಾನ್‌ ಮತ್ತು ಫ್ಯಾಷನ್ ಡಿಸೈನರ್ ಸಿಮನ್ ಖಾಂಭಟ್ಟ ಅವರಿಗೂ ಈ ವಾರ ನೋಟಿಸ್‌ ನೀಡಲಾಗುವುದು ಎನ್‌ಸಿಬಿ ಮಾಹಿತಿ ನೀಡಿದೆ.

ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್‌ ಸೇರಿದಂತೆ 12 ಮಂದಿಯನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.