ನವದೆಹಲಿ: ‘ಆಗ್ನೇಯ ದೆಹಲಿಯ ಕಾಲಿಂದಿಕುಂಜ್ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ₹1,200 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
‘ಅಫ್ಗಾನಿಸ್ತಾನದ ಪ್ರಜೆಗಳಾದ ಮುಸ್ತಾಫಾ ಸ್ಥಾನಿಕ್‌ಜಾಯ್ (23) ಮತ್ತು ರಹೀಮುಲ್ಲಾ ರಹೀಮಿ (44) ಎಂಬುವರನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 3 ಕ್ವಿಂಟಲ್ 12.5 ಕೆ.ಜಿ.ಮೆಟಾಂಪೆಟಮೈನ್ ಹಾಗೂ 10 ಕೆ.ಜಿ.ಹೆರಾಯಿನ್ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.