ADVERTISEMENT

ದ್ವಾರಕಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

ಪಿಟಿಐ
Published 11 ಸೆಪ್ಟೆಂಬರ್ 2022, 13:26 IST
Last Updated 11 ಸೆಪ್ಟೆಂಬರ್ 2022, 13:26 IST
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (ಚಿತ್ರಕೃಪೆ: @RahulGandhi)
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (ಚಿತ್ರಕೃಪೆ: @RahulGandhi)   

ಭೋಪಾಲ್: ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.

ಸ್ವಾಮಿ ಸರಸ್ವತಿ ಅವರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನರಸಿಂಗಪುರ ಜಿಲ್ಲೆಯಲ್ಲಿರುವ ಆಶ್ರಮದಲ್ಲಿ ಮಧ್ಯಾಹ್ನ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಪೀಠದ ಸ್ವಾಮಿ ಸದಾನಂದ ಮಹಾರಾಜ್‌ ತಿಳಿಸಿದ್ದಾರೆ.

ಸಿಯೋನಿ ಜಿಲ್ಲೆಯ ದಿಘೋರಿ ಎಂಬ ಹಳ್ಳಿಯಲ್ಲಿ 1924ರಲ್ಲಿ ಜನಿಸಿದ ಸ್ವರೂಪಾನಂದ ಸರಸ್ವತಿ ಅವರ ಬಾಲ್ಯದ ಹೆಸರು ಪಥಿರಾಮ್‌ ಉಪಾದ್ಯಾಯ. ದೇವರ ಹುಡುಕಾಟದಲ್ಲಿ ತೊಡಗಿದ ಅವರು ತಮ್ಮ 9ನೇ ವಯಸ್ಸಿನಲ್ಲಿ ಮನೆಯಿಂದ ಹೊರ ನಡೆದಿದ್ದರು.

ADVERTISEMENT

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೆರೆವಾಸವನ್ನೂ ಅನುಭವಿಸಿದ್ದರು. 1981ರಲ್ಲಿ ಶಂಕರಾಚಾರ್ಯರಾಗಿ ಬದಲಾದ ಅವರ 99ನೇ ವರ್ಷದ ಜನ್ಮದಿನವನ್ನು ಇತ್ತೀಚೆಗೆ ಆಚರಿಸಲಾಗಿತ್ತು ಎಂದು ಸ್ವಾಮೀಜಿಯ ಅನುಯಾಯಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.