ADVERTISEMENT

ಹರ್ಯಾಣದ ಆಸ್ಪತ್ರೆಯಲ್ಲಿ ಕೈ ಕೊಟ್ಟ ಎ.ಸಿ; 2 ನವಜಾತ ಶಿಶುಗಳು ಸಾವು

ಏಜೆನ್ಸೀಸ್
Published 27 ಜೂನ್ 2018, 15:10 IST
Last Updated 27 ಜೂನ್ 2018, 15:10 IST
ಪ್ರಾತಿನಿಧಿಕ ಚಿತ್ರ  (ಕೃಪೆ: ಪಿಟಿಐ)
ಪ್ರಾತಿನಿಧಿಕ ಚಿತ್ರ (ಕೃಪೆ: ಪಿಟಿಐ)   

ಪಾಣಿಪತ್‌: ಹರ್ಯಾಣದ ಪಾಣಿಪತ್‌ ನಗರದ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಎ.ಸಿ ಕೈ ಕೊಟ್ಟ ಕಾರಣ ಎರಡು ನವಜಾತ ಶಿಶುಗಳು ಸಾವಿಗೀಡಾಗಿವೆ.ಇನ್ನೆರಡು ಶಿಶುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ಇಲ್ಲಿನ ಸಿವಿಲ್ ಹಾಸ್ಪಿಟಲ್‌‍ನಲ್ಲಿ ಎರಡು ನವಜಾತ ಶಿಶುಗಳನ್ನು ನವಜಾತ ಶಿಶುಗಳ ಆರೈಕೆ ಘಟಕ (ಎಸ್‍ಎನ್‌ಸಿಯು)ನಲ್ಲಿ ಸೋಮವಾರ ದಾಖಲು ಮಾಡಲಾಗಿತ್ತು.ಶಿಶುಗಳ ಮರಣವನ್ನು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ.

ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯೇನೂ ಇಲ್ಲ ಆದರೆ ವೋಲ್ಟೇಜ್ ಏರಿಳಿತದಿಂದಾಗಿ ಎ.ಸಿ ಮತ್ತು ಇತರ ಯಂತ್ರಗಳು ಸರಿಯಾಗಿ ಕಾರ್ಯವೆಸಗುತ್ತಿಲ್ಲ. ಈ ಸಮಸ್ಯೆ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಎರಡು ಶಿಶುಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದೆವು.ಆದರೆ ದಾರಿ ಮಧ್ಯೆ ಆಂಬುಲೆನ್ಸ್ ನಲ್ಲಿ ಶಿಶುಗಳು ಅಸುನೀಗಿವೆ ಎಂದು ಮಕ್ಕಳ ತಜ್ಞ ಡಾ.ದಿನೇಶ್ ಹೇಳಿದ್ದಾರೆ.

ADVERTISEMENT

ಏತನ್ಮಧ್ಯೆ, ಈ ಪ್ರದೇಶದಲ್ಲಿ ನಾವು ವೋಲ್ಟೇಜ್ ಏರಿಳಿತ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಎಂದು ಚೀಫ್ ಮೆಡಿಕಲ್ ಆಫೀಸರ್ ಸಂತ್ ಲಾಲ್ ವರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.