ADVERTISEMENT

ಡಿವೈಎಸ್‌ಪಿ ದೇವಿಂದರ್‌ ಸಿಂಗ್‌ ವಜಾಕ್ಕೆ ಶಿಫಾರಸು

ಪಿಟಿಐ
Published 15 ಜನವರಿ 2020, 19:45 IST
Last Updated 15 ಜನವರಿ 2020, 19:45 IST
ದೇವಿಂದರ್‌ ಸಿಂಗ್
ದೇವಿಂದರ್‌ ಸಿಂಗ್   

ಜಮ್ಮು :ಇಬ್ಬರು ಉಗ್ರರೊಂದಿಗೆ ಬಂಧನಕ್ಕೊಳಗಾಗಿರುವ, ಅಮಾನತುಗೊಂಡ ಪೊಲೀಸ್‌ ಅಧಿಕಾರಿ ದವಿಂದರ್‌ ಸಿಂಗ್‌ ಅವರನ್ನು ವಜಾಗೊಳಿಸಬೇಕು ಹಾಗೂ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲು ಶಿಫಾರಸು ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್ಬಾಗ್‌ ಸಿಂಗ್‌ ಬುಧವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜ್ಯ ಸರ್ಕಾರ 2018ರ ಸ್ವಾತಂತ್ರ್ಯ ದಿನಾಚರಣೆಯಂದು ದೇವಿಂದರ್‌ಗೆ ನೀಡಿರುವ ಶೌರ್ಯ ಪದಕವನ್ನು ಹಿಂದಕ್ಕೆ ಪಡೆಯಬೇಕು ಎಂದು ಭದ್ರತಾ ಪಡೆ ಶಿಫಾರಸು ಮಾಡಿದೆ ಎಂದು ತಿಳಿಸಿರುವ ಅವರು, ದೇಶದ ಮತ್ತು ಇಲ್ಲಿನ ಜನರ ಬಗ್ಗೆ ನಿಷ್ಠೆ ಇಲ್ಲದ ವ್ಯಕ್ತಿಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಡಿವೈಎಸ್‌ಪಿ ದೇವಿಂದರ್‌ ಸಿಂಗ್ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರಾದ ನವೀದ್‌ ಬಾಬು ಮತ್ತು ಅಲ್ತಾಫ್‌ನನ್ನು ಕಾರಿನಲ್ಲಿ ಶೋಪಿಯಾನ್‌ ಪ್ರದೇಶದಿಂದ ಕರೆದೊಯ್ಯುತ್ತಿದ್ದರು. ಕುಲ್ಗಾಮ್‌ನ ಮೀರ್‌ ಬಜಾರ್‌ನಲ್ಲಿ ಈ ಮೂವರನ್ನು ಬಂಧಿಸಲಾಗಿತ್ತು. ಕಾರಿನಲ್ಲಿ ಎರಡು ಎ.ಕೆ. ರೈಫಲ್ಸ್‌ಗಳು ಪತ್ತೆಯಾಗಿದ್ದವು. ಸಿಂಗ್‌ ಅವರ ಮನೆಯಲ್ಲಿ ಶೋಧ ನಡೆಸಿದಾಗ ಕಾನೂನು ಬಾಹಿರವಾಗಿ ಇಟ್ಟುಕೊಂಡಿದ್ದ ಎರಡು ಪಿಸ್ತೂಲುಗಳು ಮತ್ತು ಒಂದು ಎ.ಕೆ. ರೈಫಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಸೋಮವಾರ ಈ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.