ADVERTISEMENT

ನೇಪಾಳ ವಿದೇಶಾಂಗ ಸಚಿವ ಪ್ರದೀಪಕುಮಾರ್‌ ಜೊತೆ ಜೈಶಂಕರ್‌ ಚರ್ಚೆ

ಪಿಟಿಐ
Published 15 ಜನವರಿ 2021, 9:34 IST
Last Updated 15 ಜನವರಿ 2021, 9:34 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ನವದೆಹಲಿ: ನೇಪಾಳ ವಿದೇಶಾಂಗ ಸಚಿವ ಪ್ರದೀಪಕುಮಾರ್‌ ಗ್ಯಾವಲಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಶುಕ್ರವಾರ ಮಾತುಕತೆ ನಡೆಸಿದರು.

ಪ್ರದೀಪಕುಮಾರ್‌ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಭಾರತ– ನೇಪಾಳ ಜಂಟಿ ಆಯೋಗದ (ಜೆಸಿಎಂ) ಕಾರ್ಯಸೂಚಿಯಂತೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಮೂಲಗಳು ಹೇಳಿವೆ.

‘ಉಭಯ ದೇಶಗಳ ವಿದೇಶಾಂಗ ಸಚಿವರ ನಡುವಿನ ಮಾತುಕತೆ ವೇಳೆ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡಲಾಗುತ್ತದೆ. ಗಡಿ ವಿವಾದ ಈ ಸಂದರ್ಭದಲ್ಲಿ ಪ್ರಸ್ತಾಪವಾಗುವ ಸಂಭವ ಇಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ತಿಳಿಸಿದರು.

ADVERTISEMENT

ಭಾರತದ ಕೆಲವು ಪ್ರದೇಶಗಳು ತನಗೆ ಸೇರಿದವು ಎಂದು ಹೇಳಿಕೊಂಡ ನೇಪಾಳ, ಆ ಪ್ರದೇಶಗಳನ್ನು ಒಳಗೊಂಡ ಹೊಸ ಭೂಪಟವನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಈ ಬಗ್ಗೆ ಭಾರತ ಪ್ರತಿಭಟನೆ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.