ADVERTISEMENT

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಏಪ್ರಿಲ್ 18, 23ಕ್ಕೆ ಮತದಾನ

ಮೇ 23ಕ್ಕೆ ಫಲಿತಾಂಶ *ಚುನಾವಣಾ ಆಯೋಗ ಘೋಷಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 14:25 IST
Last Updated 10 ಮಾರ್ಚ್ 2019, 14:25 IST
ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ
ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ   

ನವದೆಹಲಿ:ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಏಪ್ರಿಲ್ 11ರಿಂದ ಆರಂಭವಾಗಿ ಮೇ 19ಕ್ಕೆ ಕೊನೆಗೊಳ್ಳಲಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 18ರಂದು 14 ಕ್ಷೇತ್ರಗಳಿಗೆಮತ್ತು ಏಪ್ರಿಲ್ 23ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿದೇಶದಾದ್ಯಂತ ಇಂದಿನಿಂದಲೇಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದುಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ತಿಳಿಸಿದರು.

ADVERTISEMENT

ಇಲ್ಲಿನವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಲೋಕಸಭೆಯ ಅವಧಿಯು ಜೂನ್‌ 3ಕ್ಕೆ ಮುಕ್ತಾಯಗೊಳ್ಳಲಿದೆ. ಲೋಕಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದೆಎಂದರು.

ಈ ಬಾರಿ ಒಟ್ಟು 90 ಕೋಟಿ ಮತದಾರರಿದ್ದಾರೆ. ಈ ಪೈಕಿ 1.5 ಕೋಟಿ ಮತದಾರರು 18–19 ವಯೋಮಾನದವರು.2014ರ ಲೋಕಸಭಾ ಚುನಾವಣೆಯಲ್ಲಿ 9 ಲಕ್ಷ ಮತದಾನ ಕೇಂದ್ರಗಳಿದ್ದರೆ, ಈ ಬಾರಿ 10 ಲಕ್ಷ ಇರಲಿವೆ. ಎಂದು ಅವರು ಮಾಹಿತಿ ನೀಡಿದರು.

ಹಂತಗಳು ದಿನಾಂಕ ರಾಜ್ಯಗಳು ಕ್ಷೇತ್ರಗಳು
1 ಏಪ್ರಿಲ್ 11 20 91
2 ಏಪ್ರಿಲ್ 18 13 97
3 ಏಪ್ರಿಲ್ 23 14 115
4 ಏಪ್ರಿಲ್ 29 9 71
5 ಮೇ 6 7 51
6 ಮೇ 12 7 59
7 ಮೇ 19 8 59

* ಫಲಿತಾಂಶ – ಮೇ 23

ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು

ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾದಲ್ಲಿ 2 ಹಂತಗಳಲ್ಲಿ, ಅಸ್ಸಾಂ, ಛತ್ತೀಸ್‌ಗಢಗಳಲ್ಲಿ 3 ಹಂತಗಳಲ್ಲಿ, ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾಗಳಲ್ಲಿ 4 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಒಂದೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು

ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಅಂಡಮಾನ್&ನಿಕೋಬಾರ್, ದಾದ್ರಾ&ನಗರ್‌ಹವೇಲಿ, ದಾಮ್ನ್‌&ದೀವ್, ಲಕ್ಷದ್ವೀಪ, ದೆಹಲಿ, ಪುದುಚೆರಿ, ಚಂಡೀಗಡ, ಉತ್ತರಾಖಂಡ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.