ADVERTISEMENT

‘ಅನಧಿಕೃತ’ ವ್ಯಕ್ತಿಗಳ ವಿನಂತಿಯನ್ನು ಪರಿಗಣಿಸಲಾಗದು: ಚುನಾವಣಾ ಆಯೋಗ

ಪಿಟಿಐ
Published 2 ಜುಲೈ 2025, 10:48 IST
Last Updated 2 ಜುಲೈ 2025, 10:48 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಸಭೆಗೆ ಸಮಯ ನಿಗದಿಪಡಿಸುವ ಕುರಿತಂತೆ ರಾಜಕೀಯ ಪಕ್ಷಗಳ ಮುಖ್ಯಸ್ಥರ ವಿನಂತಿಗಳನ್ನು ಮಾತ್ರ ಪರಿಗಣಿಸುವುದಾಗಿ ಚುನಾವಣಾ ಆಯೋಗ ಬುಧವಾರ ತಿಳಿಸಿದೆ.

ಈ ವಿಚಾರವಾಗಿ ವಿವಿಧ ಪಕ್ಷಗಳ ಪರವಾಗಿ ‘ಅನಧಿಕೃತ’ ವ್ಯಕ್ತಿಗಳಿಂದ ವಿನಂತಿಗಳು ಬರುತ್ತಿದ್ದು, ಇನ್ನು ಮುಂದೆ ಅಂತಹ ವಿನಂತಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.

ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಚರ್ಚಿಸಲು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಹಲವಾರು ವ್ಯಕ್ತಿಗಳು ಸಮಯ ನಿಗದಿಪಡಿಸುವಂತೆ ಆಯೋಗವನ್ನು ಕೋರುತ್ತಿದ್ದಾರೆ ಎಂದು ಅದು ಹೇಳಿದೆ.

ADVERTISEMENT

‘ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಕಾನೂನು ಸಲಹೆಗಾರರು ಜುಲೈ 2ರಂದು ತುರ್ತು ಸಭೆ ನಡೆಸುವಂತೆ ಕೋರಿದ್ದರು. ಜೂನ್‌ 30ರಂದು ಬಂದ ಇ–ಮೇಲ್‌ನಲ್ಲಿ ಅವರು ತಾವು ಬಹುಪಕ್ಷ ನಿಯೋಗವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ಪಕ್ಷಗಳ ಹೆಸರನ್ನು ಉಲ್ಲೇಖಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಸಿಪಿಐ(ಎಂಎಲ್) ಲಿಬರೇಶನ್ ಮತ್ತು ಸಿಪಿಐ(ಎಂ) ಎರಡು ಪಕ್ಷಗಳು ಮಾತ್ರ ಸಭೆಯಲ್ಲಿ ಭಾಗವಹಿಸುವುದನ್ನು ಇದುವರೆಗೆ ದೃಢಪಡಿಸಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.