ADVERTISEMENT

ಮುಖ್ತಾರ್‌ ಅನ್ಸಾರಿಯ7 ಸ್ಥಿರಾಸ್ತಿ ಜಪ್ತಿ –ಇ.ಡಿ

ಪಿಟಿಐ
Published 21 ಅಕ್ಟೋಬರ್ 2022, 20:42 IST
Last Updated 21 ಅಕ್ಟೋಬರ್ 2022, 20:42 IST
ಬಂಧನದಲ್ಲಿರುವ ಮುಖ್ತಾರ್‌ ಅನ್ಸಾರಿ –ಪಿಟಿಐ ಚಿತ್ರ
ಬಂಧನದಲ್ಲಿರುವ ಮುಖ್ತಾರ್‌ ಅನ್ಸಾರಿ –ಪಿಟಿಐ ಚಿತ್ರ   

ನವದೆಹಲಿ: ರಾಜಕಾರಣಿ, ಮಾಜಿ ಪಾತಕಿ ಮುಖ್ತಾರ್‌ ಅನ್ಸಾರಿಗೆ ಸೇರಿದ 7 ಸ್ಥಿರಾಸ್ತಿಗಳನ್ನುಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಿದ್ದಾರೆ.

ಪಿಎಂಎಲ್ಎ ಕಾಯ್ದೆಯಡಿ ಜಪ್ತಿ ಮಾಡಲಾದ ಈ ಆಸ್ತಿಯ ನೋಂದಣಿ ಮೌಲ್ಯ ₹ 1.48 ಕೋಟಿ. ನೋಂದಣಿ ಸಂದರ್ಭದಲ್ಲಿ ಇದರ ಮಾರುಕಟ್ಟೆ ಮೌಲ್ಯ ₹ 3.42 ಕೋಟಿ ಇತ್ತು ಎಂದು ಇ.ಡಿ ಅಧಿಕಾರಿಗಳು ಈ ಕುರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉತ್ತರಪ್ರದೇಶ ವಿಧಾನಸಭೆಗೆ ಐದು ಬಾರಿ ಆಯ್ಕೆಯಾಗಿದ್ದ ಅನ್ಸಾರಿ ಪ್ರಸ್ತುತ ಬಂಧನದಲ್ಲಿದ್ದು, ಬಾಂದಾ ಕಾರಾಗೃಹದಲ್ಲಿ ಇರಿಸಲಾಗಿದೆ. ಹಣ ಅಕ್ರಮ ವರ್ಗಾವಣೆ ಕುರಿತಂತೆ ಉತ್ತರ ಪ್ರದೇಶದ ವಿವಿಧೆಡೆ ಮುಖ್ತಾರ್‌ ಅನ್ಸಾರಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಮುಖ್ತಾರ್ ಅವರ ಅಣ್ಣ, ಬಿಎಸ್‌ಪಿ ಸಂಸದ ಅಫ್ಜಲ್ ಅನ್ಸಾರಿ ಅವರಿಗೆ ಸೇರಿದ್ದ ದೆಹಲಿ ನಿವಾಸ ಮತ್ತು ಘಾಜಿಪುರ್‌, ಮೊಹಮದಾಬಾದ್‌, ಮೌ ಮತ್ತು ರಾಜಧಾನಿ ಲಖನೌದಲ್ಲಿದ್ದ ಸ್ಥಳಗಳಲ್ಲಿಇ.ಡಿ. ಅಧಿಕಾರಿಗಳು ಕಳೆದ ಆಗಸ್ಟ್‌ನಲ್ಲಿ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.