ADVERTISEMENT

ಪರಬ್‌ ವಿರುದ್ಧ ಪಿಎಂಎಲ್‌ಎ ಕೇಸ್: ₹10 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಿದ ಇ.ಡಿ

ಪಿಟಿಐ
Published 4 ಜನವರಿ 2023, 19:46 IST
Last Updated 4 ಜನವರಿ 2023, 19:46 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್‌ ಪರಬ್ ಹಾಗೂ ಇತರರು ಆರೋಪಿಗಳಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ, ರತ್ನಗಿರಿ ಜಿಲ್ಲೆಯಲ್ಲಿರುವ ರೆಸಾರ್ಟ್‌ ಹಾಗೂ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ರತ್ನಗಿರಿ ಜಿಲ್ಲೆಯ ಮುರುದ್ ಎಂಬಲ್ಲಿ ಸಾಯಿ ರೆಸಾರ್ಟ್‌ ಎನ್‌ಎಕ್ಸ್‌ ಇದ್ದು, ಇದರ ಮೌಲ್ಯ₹ 7,46,47,000 ಇದೆ. 42 ಗುಂಟೆ ವಿಸ್ತೀರ್ಣದ ಕೃಷಿ ಜಮೀನು ಇದ್ದು, ಇದರ ಮೌಲ್ಯ ₹ 2,73,91,000 ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮುಖಂಡರಾಗಿರುವ ಪರಬ್, ಈ ಹಿಂದಿನ ಮಹಾವಿಕಾಸ್‌ ಆಘಾಡಿ ಮೈತ್ರಿಕೂಟ ಸರ್ಕಾರದಲ್ಲಿ ಸಾರಿಗೆ ಹಾಗೂ ಸಂಸದೀಯ ವ್ಯವಹಾರ ಸಚಿವರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.