ADVERTISEMENT

ಪಿಎಫ್‌ಐಗೆ ಸೇರಿದ ₹67 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ED

ಪಿಟಿಐ
Published 8 ನವೆಂಬರ್ 2025, 14:14 IST
Last Updated 8 ನವೆಂಬರ್ 2025, 14:14 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಗೆ ಸೇರಿದ ₹67 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

‘ಈ ಆಸ್ತಿಗಳ ಮೂಲ ಮಾಲೀಕತ್ವವು ಪಿಎಫ್‌ಐ ಒಡೆತನದಲ್ಲಿದ್ದು, ವಿವಿಧ ಟ್ರಸ್ಟ್‌ಗಳ ಹೆಸರಿನಲ್ಲಿ ನಡೆಸುತ್ತಿತ್ತು. ಸಂಘಟನೆಯ ರಾಜಕೀಯ ಪಕ್ಷ (ಎಸ್‌ಡಿಪಿಐ) ಹೊರತುಪ‍ಡಿಸಿದ ಸಂಸ್ಥೆಗಳಾಗಿವೆ’ ಎಂದು ಕೇಂದ್ರ ತನಿಖಾ ಸಂಸ್ಥೆಯು ತಿಳಿಸಿದೆ.

ದೇಶದ ವಿವಿಧೆಡೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ 2022ರ ಸೆಪ್ಟೆಂಬರ್‌ನಲ್ಲಿ ಪಿಎಫ್‌ಐ ಸಂಘಟನೆ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು. ಇದಾದ ಬಳಿಕ ಸಂಘಟನೆಗೆ ಸೇರಿದ ವಿವಿಧ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಇ.ಡಿ. ಹಾಗೂ ರಾಜ್ಯ ಪೊಲೀಸ್‌ ಘಟಕಗಳ ಜೊತೆ ಸೇರಿಕೊಂಡು ದಾಳಿ ನಡೆಸಲಾಗಿತ್ತು.

ADVERTISEMENT

2009ರಲ್ಲಿ ಎಸ್‌ಡಿಪಿಐ ರಾಜಕೀಯ ಪಕ್ಷವು ಸ್ಥಾಪನೆಗೊಂಡಿದ್ದು, ಚುನಾವಣಾ ಆಯೋಗದಡಿಯಲ್ಲಿ ನೋಂದಣಿಯಾಗಿದೆ.

ಪಿಎಫ್‌ಐಗೆ ಸೇರಿದ ₹67.03 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿಯು ನವೆಂಬರ್‌ 6ರಂದು ಹೊರಡಿಸಿದ ತಾತ್ಕಾಲಿಕ ಆದೇಶದಲ್ಲಿ ತಿಳಿಸಿದೆ. ಹೊಸ ಆದೇಶದಿಂದ ಇದುವರೆಗೂ ಪಿಎಫ್‌ಐಗೆ ಸೇರಿದ ₹129 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್‌ಐನ 28 ಕಾರ್ಯಕರ್ತರು ಹಾಗೂ ನಾಯಕರನ್ನು ಬಂಧಿಸಿದ್ದು, ಹಲವು ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಬಂಧಿತರಲ್ಲಿ ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಕೂಡ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.