ADVERTISEMENT

ಚೀನಿ ಲೋನ್ ಆ್ಯಪ್‌ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಪೇಟಿಎಂ ಮೇಲೆ ಮತ್ತೆ ಇಡಿ ದಾಳಿ

ಪಿಟಿಐ
Published 15 ಸೆಪ್ಟೆಂಬರ್ 2022, 7:39 IST
Last Updated 15 ಸೆಪ್ಟೆಂಬರ್ 2022, 7:39 IST
ಪೇಟಿಎಂ
ಪೇಟಿಎಂ    

ನವದೆಹಲಿ: ಚೀನಿ ಲೋನ್ ಆ್ಯಪ್‌ಗಳಅವ್ಯವಹಾರಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಡಿಜಿಟಲ್ ಪಾವತಿ ಕಂಪನಿಗಳಾದ ಪೇಟಿಎಂ ಮತ್ತು ಪೇಯು ಮೇಲೆ ಮತ್ತೆ ದಾಳಿ ನಡೆಸಿದೆ.

ಸೆ.3 ರಂದು ಬೆಂಗಳೂರಿನಲ್ಲಿಪೇಟಿಎಂ,ರೋಜರ್ ಪೇ, ಕ್ಯಾಶ್‌ಫ್ರೀಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ ದಾಳಿ ನಡೆಸಿತ್ತು. ಇದರ ಮುಂದುವರೆದ ಭಾಗವಾಗಿ ಬುಧವಾರ ಮೆಟ್ರೊ ನಗರಳಲ್ಲಿರುವ ಪೇಟಿಎಂ, ಪೇಯು ಕಂಪನಿಗಳ ಮುಂಬೈ, ದೆಹಲಿ, ಗುರುಗ್ರಾಮ, ಲಕನೌ ಹಾಗೂ ಕೋಲ್ಕತ್ತಗಳಲ್ಲಿನ ಕಚೇರಿಗಲ್ಲಿ ತಪಾಸಣೆ ನಡೆದಿದೆ.

ತಪಾಸಣೆ ಮುಂದುವರೆದಿದ್ದು, ಈ ಕಾರ್ಯಾಚರಣೆಯ ಮಾಹಿತಿಯನ್ನು ಇ.ಡಿ ಇನ್ನೂ ಒದಗಿಸಿಲ್ಲ. ಈ ದಾಳಿಯನ್ನು ಪೇಟಿಎಂ ಖಚಿತಪಡಿಸಿದ್ದು, ಬೆಂಗಳೂರಿನಲ್ಲಿ ಆರಂಭಿಸಲಾದ ವಿಚಾರಣೆ ಭಾಗವಾಗಿ ಇದು ನಡೆದಿದೆ ಎಂದು ಪಿಟಿಐಗೆ ತಿಳಿಸಿದೆ.

ADVERTISEMENT

ಪೇಟಿಎಂ ಅಕೌಂಟ್‌ನಲ್ಲಿರುವ ಕೆಲ ವ್ಯಕ್ತಿಗಳ ಹಣವನ್ನು ತಡೆಹಿಡಿಯಲು ಇ.ಡಿ ಕೋರಿದೆ ಎಂದು ಪೇಟಿಎಂ ತಿಳಿಸಿದೆ.

ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು, ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕನಿಷ್ಠ 18 ಎಫ್‌ಐಆರ್‌ಗಳು ದಾಖಲಾಗಿದ್ದು.

ದೇಶದ ವಿವಿಧ ನಗರಗಳ ಸೈಬರ್ ಕ್ರೈಂ ಠಾಣೆಗಳಲ್ಲೂ ದೂರು ದಾಖಲಾಗಿದ್ದವು. ಅವುಗಳನ್ನು ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ದಾಳಿ ವೇಳೆ, ತನಿಖಾ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ ₹ 17 ಕೋಟಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.